ಚಾಮರಾಜನಗರ: ಶಿವರಾತ್ರಿ ಹಬ್ಬದ ಹಿನ್ನೆಲೆ ಮಹದೇಶ್ವರ ಬೆಟ್ಟಕ್ಕೆ ಸಹಸ್ರಾರು ಭಕ್ತರ ಆಗಮಿಸುವ ಹಿನ್ನೆಲೆ ಭಕ್ತರ ಸುರಕ್ಷತೆಗೆ ಅರಣ್ಯ ಇಲಾಖೆ ವನ್ಯಪ್ರಾಣಿಗಳಿಂದ ಭಕ್ತರಿಗೆ ತೊಂದರೆಯಾಗದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಇತ್ತೀಚೆಗೆ ಪಾದಯಾತ್ರೆಗೆ ತೆರಳುತ್ತಿದ್ದ ಭಕ್ತರೊಬ್ಬರು ಚಿರತೆ ದಾಳಿಗೆ ಬಲಿಯಾಗಿದ್ದರು. ಈ ಹಿನ್ನಲೆ ಎಚ್ಚೆತ್ತುಕೊಂಡಿರುವ ಮಲೆ ಮಹದೇಶ್ವರ ವನ್ಯಧಾಮದ ಅಧಿಕಾರಿಗಳು, ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ 8 ತಂಡಗಳ ನಿಯೋಜನೆ ಮಾಡಿದ್ದು, ತಾಳಬೆಟ್ಟದಲ್ಲಿ ಒಂದು ತಂಡ, ಉಳಿದ 7 ತಂಡಗಳು ಪ್ರತಿ 1 ಕಿ.ಮೀ ನಲ್ಲಿ ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ.
ಪ್ರತಿ ತಂಡದಲ್ಲಿ ಒಬ್ಬ ಡಿಆರ್ ಎಫ್ಒ, ಕಳ್ಳಬೇಟೆ ಶಿಬಿರದ ಸಿಬ್ಬಂದಿ, ಪೊಲೀಸ್, ಗೃಹರಕ್ಷಕ ದಳ ಹಾಗೂ ಪ್ರಾಧಿಕಾರ ಸಿಬ್ಬಂದಿಗೆ ವಾಕಿಟಾಕಿ ಟಾರ್ಚ್, ಪಟಾಕಿ ಮಚ್ಚು, ಗನ್‌ನೊಂದಿಗೆ ಕಾರ್ಯ ನಿರ್ವಹಿಸಲಿರುವ ತಂಡಗಳಿಗೆ ಗಸ್ತು ತಿರುಗಲು ಎರಡು ವಾಹನ ಆಯೋಜನೆ ಮಾಡಲಾಗಿದೆ.
ವನ್ಯಜೀವಿ ಚಲನವಲನ ಆಧಾರಿಸಿ ಡ್ರೋನ್ ಹಾಗೂ ಚಿರತೆ ಕಾರ್ಯಪಡೆ ತಂಡದಿಂದ ನಿಗಾ ವಹಿಸಲಗಿದ್ದು, ವನ್ಯಜೀವಿಗಳ ಕುರಿತು ನಾಮಫಲಕ ಅಳವಡಿಸಿಲಾಗಿದ್ದು, ತಾಳಬೆಟ್ಟದಿಂದ ಅರಣ್ಯ ಪ್ರದೇಶದಲ್ಲಿ ಗುಂಪುಗುಂಪಾಗಿ ಹೋಗಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಡೆಡ್ಲಿ ಆಕ್ಸಿಡೆಂಟ್ | ಅಪಘಾತದ ರಭಸಕ್ಕೆ ಕಾರು ಪೀಸ್ ಪೀಸ್.. ಓರ್ವ ಸಾವು, ಮೂವರು ಗಂಭೀರ!



















