ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಗಾಂಜಾ ಮಾರುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಾಂಜಾ ಬಳಸಿ ತಯಾರಿಸುವ ಭಾಂಗ್ ಚಾಕೊಲೇಟ್ ಹಲವೆಡೆ ಮಾರಾಟವಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ದಾಳಿ ನಡೆಸಿದ ಜಿಗಣಿ ಇನ್ಸ್ಪೆಕ್ಟರ್ ಮಂಜುನಾಥ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಲದೇ, ಅಂತರ್ ರಾಜ್ಯ ಭಾಂಗ್ ಚಾಕಲೋಟ್ ಪೂರೈಕೆ ಮಾಡುತ್ತಿದ್ದ ಆರು ಪೆಡ್ಲರ್ ಗಳನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 10 ಲಕ್ಷ ರೂ. ಮೌಲ್ಯದ 50 ಕೆಜಿ ಚರಸ್ ಚಾಕೊಲೇಟ್ ಜಪ್ತಿ ಮಾಡಲಾಗಿದೆ.
ಚರಸ್, ಗಾಂಜಾ ಬಳಸಿ ತಯಾರಿಸುವ ಮಾದಕ ದ್ರವ್ಯ. ಮಕ್ಕಳು ತಿನ್ನುವ ಸಾಮಾನ್ಯ ಚಾಕೊಲೇಟ್ ರೀತಿಯೇ ಕಾಣಿಸುತ್ತದೆ. ಕೈಗಾರಿಕಾ ಪ್ರದೇಶ, ಶಾಲಾ ಕಾಲೇಜು ಆವರಣಗಳನ್ನು ಗುರಿಯಾಗಿಸುತ್ತಿದ್ದ ಆರೋಪಿಗಳು ಒಂದು ಚಾಕೊಲೇಟ್ಗೆ ನೂರು ರೂ. ನಂತೆ ಮಾರಾಟ ಮಾಡುತ್ತಿದ್ದರು.
ಆರೋಪಿಗಳು ಚಾಕೊಲೇಟ್ ಗಳನ್ನು ಉತ್ತರ ಪ್ರದೇಶದಿಂದ ರೈಲು ಮೂಲಕ ನಗರಕ್ಕೆ ತರುತ್ತಿದ್ದರು ಎನ್ನಲಾಗಿದೆ. ಸದ್ಯ ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.