ಇಡೀ ದೇಶವೇ ಚುನಾವಣಾ ಗುಂಗಿನಲ್ಲಿ ರಂಗೇರಿದೆ. ಎಲ್ಲ ಪಕ್ಷಗಳೂ ಆರೋಪ- ಪ್ರತ್ಯಾರೋಪ ಮಾಡುತ್ತಿವೆ. ಮೋದಿ ವಿರುದ್ಧ ಹೇಗಾದರೂ ಮಾಡಿ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಬೇಕೆಂಬ ಕಾರಣಕ್ಕೆ ವಿರೋಧಿಗಳು ಯುವಕರಿಗೆ ಕೆಲಸ ಕೊಡುತ್ತೇನೆಂದು ಮೋದಿ ಕೈಕೊಟ್ಟು ವಂಚನೆ ಮಾಡಿದ್ದಾರೆ ಎಂದು ಪ್ರಚಾರದಲ್ಲಿ ಉದ್ದುದ್ದ ಭಾಷಣ ಬಿಗಿಯುತ್ತಿದ್ದವು. ಇದರ ಮಧ್ಯೆಯೇ ವರದಿಯೊಂದು ಹೊರ ಬಂದಿದ್ದು, ಮೋದಿ ಸರ್ಕಾರದ ಸಾಧನೆಯನ್ನು ಕೊಂಡಾಡಿದೆ.
ಈ ವರದಿ ವಿರೋಧಿಗಳು ಹೇಳುತ್ತಿರುವುದು ಸುಳ್ಳು ಎಂದು ಹೇಳುವಂತಿದೆ. ಈ ವರದಿಯಲ್ಲಿ ದೇಶದ ಅಭಿವೃದ್ಧಿ ಎಷ್ಟರ ಮಟ್ಟಿಗೆ ಆಗಿದೆ ಎಂಬುವುದಿದೆ. ದೇಶದಲ್ಲಿ ಕಳೆದ 10 ವರ್ಷಗಳಿಂದ ನಿರುದ್ಯೋಗ ಸಮಸ್ಯೆಗಳು ದೂರವಾಗಿವೆ. ಹತ್ತು ವರ್ಷಗಳಲ್ಲಿ ಕೋಟ್ಯಂತರ ನಿರುದ್ಯೋಗಿಗಳಿಗೆ ಉದ್ಯೋಗ ದೊರೆತಿವೆ ಎಂಬುವುದಕ್ಕೆ ಈ SKOCH ಗ್ರೂಪ್ ವರದಿ ಸಾಕ್ಷಿಯಾಗಿ ನಿಂತಿದೆ.
SKOCH ವರದಿಯಂತೆ 2014-24ರಲ್ಲಿ 51.40 ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಯಾಗಿದೆ. 2014 ರಿಂದ 2024 ರ ನಡುವೆ ಮೋದಿ ಸರ್ಕಾರದ ಅವಧಿಯಲ್ಲಿ 51.40 ಕೋಟಿ ಉದ್ಯೋಗ ಅವಕಾಶಗಳು ಸೃಷ್ಟಿಯಾಗಿವೆ. ಈ ವರದಿಯು ಇಡೀ ವರ್ಷ ವ್ಯಕ್ತಿಯೊಬ್ಬರು ಮಾಡಿದ ಕೆಲಸ ಆಧರಿಸಿದೆ.
ಈ ವರದಿ ಜನರೇಟಿವ್ ಇಂಪ್ಯಾಕ್ಟ್ ಆಫ್ ಮೋದಿನಾಮಿಕ್ಸ್: ದಿ ಪ್ಯಾರಡೈಮ್ ಶಿಫ್ಟ್ಸ್ (Employment Generative Impact of ModiNomics: The Paradigm Shifts) ಎಂಬ ಶೀರ್ಷಿಕೆಯಲ್ಲಿ 80 ಪ್ರಕರಣಗಳ ಅಧ್ಯಯನವನ್ನು ಆಧರಿಸಿದೆ. ಇದರಲ್ಲಿ ಅನೇಕ ಸಾಲಗಳನ್ನು ಪಡೆದ ಸಾಲಗಾರರು ಮತ್ತು ವಿವಿಧ ಸರ್ಕಾರಿ ಯೋಜನೆಗಳ ಡೇಟಾ ಕೂಡ ಇವೆ.
ದೇಶದಲ್ಲಿ 2014-24ರ ವರೆಗೆ ಮೋದಿ ಸರ್ಕಾರ 51.40 ಕೋಟಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. 51.40 ಕೋಟಿಯಲ್ಲಿ 19.79 ಕೋಟಿ ಉದ್ಯೋಗಗಳನ್ನು ಆಡಳಿತ ನೇತೃತ್ವದ ಮಧ್ಯಸ್ಥಿಕೆಗಳಿಂದ ಸೃಷ್ಟಿಸಲಾಗಿದ್ದರೆ, ಇನ್ನುಳಿದ 31.61 ಕೋಟಿ ಆಡಳಿತ ನೇತೃತ್ವದ ಮಧ್ಯಸ್ಥಿಕೆ ಸೃಷ್ಟಿಸಿವೆ.
ಈ ವರದಿಯನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಳ್ಳುವುದರ ಮೂಲಕ ವಿರೋಧಿಗಳ ಬಾಯಿಗೆ ಬೀಗ ಹಾಕಿದ್ದಾರೆ. ಅಲ್ಲದೇ, ಯೋಗಿ ಆದಿತ್ಯನಾಥ್ ಮೋದಿ ಸರ್ಕಾರದ 10 ವರ್ಷಗಳಲ್ಲಿ 514 ಮಿಲಿಯನ್ ಮಂದಿ ಉದ್ಯೋಗಸ್ಥರಾಗಿದ್ದಾರೆಂದು ಬರೆದುಕೊಂಡಿದ್ದಾರೆ.
SKOCH ಗ್ರೂಪ್ 1997ರಿಂದ ಭಾರತದ ಸಾಮಾಜಿಕ-ಆರ್ಥಿಕ ಸಮಸ್ಯೆಗಳೊಂದಿಗೆ ವ್ಯವಹಾರ ನಡೆಸುತ್ತಿದೆ. ಆಂತರಿಕ ಬೆಳವಣಿಗೆಯ ಮೇಲೂ ಕೇಂದ್ರೀಕರಿಸಿದೆ. SKOCH ಒಂದು ಬಿಲಿಯನ್ ಕನಸುಗಳ ಶೀರ್ಷಿಕೆಯ ಉದ್ಯೋಗ ಸೃಷ್ಟಿಯ ಕುರಿತು ಅಧ್ಯಯನ ನಡೆಸಿದೆ. ಪ್ರಸ್ತುತ ಅಧ್ಯಯನ ಹೇಳುವಂತೆ, ಕೇಂದ್ರದ 12 ಯೋಜನೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. MGNREGS, PMGSY, PMAY-G, PMAY-U, DAY-NULM, RSETI, ABRY, PMEGP, SBM-G, PLI’s, PM SVanidhi ಸಮೀಕ್ಷೆಯಲ್ಲಿ ಸೇರಿವೆ.
SKOCH ಗ್ರೂಪ್ ಅಧ್ಯಯನದಲ್ಲಿ ಕಳೆದ 9 ವರ್ಷಗಳಲ್ಲಿ ಕ್ರೆಡಿಟ್ ಗ್ಯಾಪ್ 12.1ರಷ್ಟು ಕುಸಿದಿದೆ. ಅಂದರೆ, ಇದು ದೇಶದ ಆರ್ಥಿಕತೆ ವೇಗವಾಗಿ ಸಾಗುತ್ತಿದೆ ಎಂಬುವುದಕ್ಕೆ ಹಿಡಿದ ಕನ್ನಡಿಯಾಗಿದೆ. ದೇಶದಲ್ಲಿ ಬಡತನ ಕಡಿಮೆಯಾಗಿರುವುದನ್ನು ಕೂಡ ಈ ವರದಿ ಹೇಳಿದೆ. ಅಧ್ಯಯನದಲ್ಲಿ 2014-24ರ ಅವಧಿಯಲ್ಲಿ ಕ್ರೆಡಿಟ್ ಮಧ್ಯಸ್ಥಿಕೆಯಲ್ಲಿ ಸರಾಸರಿ 3.16 ಕೋಟಿ ಉದ್ಯೋಗ, ಸರ್ಕಾರದ ಮಧ್ಯಸ್ಥಿಕೆಗಳಲ್ಲಿ 1.98 ಕೋಟಿ ಉದ್ಯೋಗ ಸೇರಿವೆ ಎಂದು ವರದಿ ಅಧ್ಯಯನ ಅಧ್ಯಕ್ಷ ಕೊಚ್ಚಾರ್ ಹೇಳಿದ್ದಾರೆ.
ಈ ವರದಿ ಯಾವುದೇ ಪ್ರಭಾವಕ್ಕೆ ಒಳಗಾಗಿ ಸಿದ್ಧವಾಗಿದ್ದಲ್ಲ, ಹಲವಾರು ತಂತ್ರಜ್ಞರು, ನುರಿತರು ಊರೂರು ಸುತ್ತಾಡಿ ಮಾಡಿರುವ ವರದಿ. ಇದು ದೇಶದ ಅಭಿವೃದ್ಧಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರಕ್ಕೆ ನೀಡುವ ವರದಿ. ಉದ್ಯೋಗ ಸಿಕ್ಕಿಲ್ಲ ಎಂದು ಮೋದಿ ಅವಧಿಯಲ್ಲಿ ಯುವಕರು ಬೀದಿಗೆ ಬಂದು ಪ್ರತಿಭಟಿಸಿದ್ದನ್ನು ಯಾರೂ ಕಂಡಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದದ್ದು, ಈ ವರದಿಯಿಂದ ಸತ್ಯ ಅನಿಸುತ್ತಿದೆ. ಅಲ್ಲವೇ?