ಬೆಂಗಳೂರು: ಬೇಸಿಗೆ ರಜೆಗೆ ಚಿಲ್ ಆಗಲು ರೆಸಾರ್ಟ್, ಸ್ವಿಮ್ಮಿಂಗ್ ಪೂಲ್ ಗೆ ಹೋಗುವವರು ಆರೋಗ್ಯದ ಕಡೆ ಗಮನ ಕೊಡಬೇಕು ಎಂದು ಚರ್ಮರೋಗ ತಜ್ಞೆ ಡಾ. ಸಹನ ಕಿವಿ ಮಾತು ಹೇಳಿದ್ದಾರೆ.
ಚಿಲ್ ಆಗುವುದಕ್ಕಾಗಿ ಬಹುತೇಕರು ಈಗ ಸ್ವಿಮ್ಮಿಂಗ್ ಪೂಲ್ ಗೆ ಹೋಗುತ್ತಾರೆ. ಆದರೆ, ಅಲ್ಲಿನ ವಾಟರ್ ನಿಂದಾಗಿ ಚರ್ಮದ ಕಾಯಿಲೆ ಬರುತ್ತದೆ. ಸ್ವಿಮ್ಮಿಂಗ್ ಪೂಲ್ ವಾಟರ್ ಚರ್ಮದ ಮೇಲೆ ಭಾರೀ ಪರಿಣಾಮ ಬೀರುತ್ತದೆ. ನೀರಿನ ಶುದ್ದತೆಗೆ ಬಳಸುವ ಕ್ಲೋರಿನ್ ನಿಂದಾಗಿ ಚರ್ಮಕ್ಕೆ ಬರೆ ಬೀಳುತ್ತದೆ. ಅಲ್ಲದೇ, ಕ್ಲೋರಿನ್ ವಾಟಾರ್ ನಾನಾ ರೀತಿಯ ಚರ್ಮದ ಸಮಸ್ಯೆ ಕಾರಣವಾಗುತ್ತದೆ ಎಂದು ಕಿವಿ ಮಾತು ಹೇಳಿದ್ದಾರೆ.
ಹೀಗಾಗಿ ಕ್ಲೋರಿನ್ ವಾಟರ್ ಬಳಸಿದ ಸ್ವಿಮಿಂಗ್ ಪೂಲ್ ನಲ್ಲಿ ಅತಿ ಹೆಚ್ಚು ಸಮಯ ಕಳೆಯಬೇಡಿ. ಅದರಿಂದ ಚರ್ಮದ ಮೇಲೆ ಕಜ್ಜಿ, ತುರಿಕೆ , ಗಾಯಗಳು ಹೆಚ್ಚಾಗಿ ಕಂಡು ಬರುವ ಸಾದ್ಯತೆ ಇರುತ್ತದೆ. ಸಾಫ್ಟ್ ಸ್ಕೀನ್ ಇರುವಂತವರಲ್ಲಿ ಚರ್ಮ ತೆಳುವಾಗಿ ಗಾಯಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಎಂದಿದ್ದಾರೆ.