ಕಾಶಿ!! ಎಲ್ಲರಿಗೂ ಗೊತ್ತಿರುವ ಹಾಗೆ ಇದೊಂದು ಪುಣ್ಯಕ್ಷೇತ್ರ. ಕಾಶಿಗೆ ಹೋಗಿ ನದಿಯಲ್ಲಿ ಸ್ನಾನ ಮಾಡಿ, ದೇವರ ದರ್ಶನ ಪಡೆದು ತಮ್ಮ ಪಾಪಕರ್ಮಗಳನ್ನ ಕಳೆದುಕೊಳ್ಳಬೇಕು ಅನ್ನೋದು ಬಹುತೇಕ ಹಿಂದೂ ಭಕ್ತರ ಆಸೆ. ಆದರೆ ಎಲ್ಲರಿಗೂ ಕಾಶಿಗೆ ಹೋಗಲು ಕಾರಣಾಂತರಗಳಿಂದ ಸಾಧ್ಯವಾಗುವುದಿಲ್ಲ. ಅಂತವ್ರಿಗೆ ಕರ್ನಾಟಕ ನ್ಯೂಸ್ ಬೀಟ್ ಒಂದು ಸೊಲ್ಯೂಶನ್ ಅನ್ನು ತಂದಿದೆ. ಯಸ್, ಇನ್ನು ಕಾಶಿಗೆ ಹೋಗಬೇಕು ಅಂದುಕೊಂಡು ಹೋಗದೇ ಇದ್ದವರಿಗೆ ಒಂದು ಸಿಹಿ ಸುದ್ದಿ ಇದೆ. ನಮ್ಮ ಕರ್ನಾಟಕದಲ್ಲೇ ಒಂದು ಪುಣ್ಯ ಕ್ಷೇತ್ರವಿದೆ. ಈ ಕ್ಷೇತ್ರಕ್ಕೆ ಕಾಶಿಯಷ್ಟೇ ಮಹತ್ವ ಇದೆ. ಬನ್ನಿ ಹಾಗಾದ್ರೆ ಈ ಪುಣ್ಯಕ್ಷೇತ್ರ ಎಲ್ಲಿದೆ ಅನ್ನೋದನ್ನ ನೋಡೋಣ.
ಗ್ರಾಫಿಕ್..
ಕಾಶಿಯಷ್ಟೇ ಮಹತ್ವ ಹೊಂದಿರುವ ಕ್ಷೇತ್ರ ನಮ್ಮ ಮೈಸೂರಿನ ಬಳಿ ಇದೆ. ಹೌದು ಅರಮನೆ ನಗರಿ ಮೈಸೂರಿನಿಂದ ಕೇವಲ 32 ಕಿ.ಮೀ ದೂರದಲ್ಲಿ ಇರುವ ತಿರುಮಕೂಡಲು ನರಸೀಪುರ.
ಈ ಪುಣ್ಯ ಕ್ಷೇತ್ರವನ್ನು ದಕ್ಷಿಣ ಭಾರತದ ಪ್ರಯಾಗ ಎಂದು ಕರೆಯಲಾಗುತ್ತದೆ. ಉತ್ತರ ಭಾರತದ ಪ್ರಯಾಗ ಕ್ಶೇತ್ರದಲ್ಲಿ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮವಾಗುತ್ತದೆ. ಅದೇ ರೀತಿ ಟಿ. ನರಸಿಪುರದಲ್ಲಿ ತಲಕಾವೇರಿ ಹಾಗೂ ಕಪಿಲಾ ನದಿಗಳ ಸಂಗಮವಾಗುತ್ತದೆ. ಅಷ್ಟೇ ಅಲ್ಲ ಮತ್ತೊಂದು ಅಚ್ಚರಿಯ ವಿಚಾರ ಅಂದ್ರೆ ಈ ನದಿಗಳ ಜೊತೆ ಸ್ಪಟಿಕ ಸರೋವರ ಎಂಬ ನದಿ ಗುಪ್ತಗಾಮಿನಿಯಾಗಿ ಬಂದು ಸೇರುತ್ತಂತೆ.
ಪ್ಲೋ…
ಕಾಶಿಯಲ್ಲಿ ನಡೆಯುವ ಕುಂಭ ಮೇಳದ ರೀತಿಯಲ್ಲೇ ಇಲ್ಲಿಯೂ ಸಹ ಕುಂಭಮೇಳ ಜರಗುತ್ತದೆ. ಈ ಕುಂಭಮೇಳೆ ಮೂರು ವರ್ಷಗಳಿಗೊಮ್ಮೆ ಜರಗುತ್ತದೆ. ಇನ್ನು ಈ ತಿರುಮಕೂಡಲು ನರಸೀಪುರ ಕಾವೇರಿ ನದಿ ತೀರದಲ್ಲಿ ಗುಂಜಾ ನರಸಿಂಹಸ್ವಾಮಿ ದೇವಾಲಯವಿದೆ. ಈ ಹೆಸರೇ ಹೇಳುವಂತೆ ಗುಂಜಾ ನರಸಿಂಹಸ್ವಾಮಿ ದೇವಾಲಯದ ಪ್ರಮುಖ ದೇವರು ಅಂದ್ರೆ ನರಸಿಂಹಸ್ವಾಮಿ. ಗರ್ಭಗುಡಿಯಲ್ಲಿರುವ ನರಸಿಂಹಸ್ವಾಮಿಯ ಮೂರ್ತಿ ನೋಡಲು ತುಂಬಾನೇ ಆಕರ್ಷಕವಾಗಿದೆ. ತೊಡೆಯ ಮೇಲೆ ಲಕ್ಷ್ಮಿಯನ್ನ ಕೂರಿಸಿಕೊಂಡ ನರಸಿಂಹಸ್ವಾಮಿಯು ನಂಬಿದವರ ಕಷ್ಟಗಳನ್ನು ನಿವಾರಿಸುತ್ತಾನೆ ಅನ್ನೋದು ಸ್ಥಭಕ್ತರ ನಂಬಿಕೆ.
ಪ್ಲೋ…ಭಕ್ತರು
ಇನ್ನು ಈ ನರಸಿಂಹಸ್ವಾಮಿ ಕೈಯಲ್ಲಿ ಗುಲಗಂಜಿ ಇದೆ. ಇದಕ್ಕೆ ಭಕ್ತರು ಹೇಳೋ ಪ್ರಕಾರ ಭಾರತದಲ್ಲಿರುವ ಉಳಿದ ನರಸಿಂಹಸ್ವಾಮಿ ದೇವಾಲಯಕ್ಕಿಂತ ಈ ದೇವಾಲಯ ಗುಲಗಂಜಿಯಷ್ಟೇ ಶ್ರೇಷ್ಟ ಎಂದು ಹೇಳಲಾಗುತ್ತದೆ. ಹೀಗಾಗಿ ಇಲ್ಲಿಯ ದೇವರಿಗೆ ಗುಂಜಾ ನರಸಿಂಹಸ್ವಾಮಿ ಎಂದು ಕರೆಯಲಾಗುತ್ತದೆ. ಗುಲಗಂಜಿ ಸಮೇತನಾಗಿ ದರ್ಶನ ನೀಡುವ ನರಸಿಂಹ ಸ್ವಾಮಿಯ ಈ ದೇವಾಲಯಕ್ಕೆ ಭೇಟಿ ನೀಡಿದ್ರೆ ಕಾಶಿಗೆ ಭೇಟಿ ನೀಡಿದಖಷ್ಟೇ ಸಿಗುತ್ತೆ ಅನ್ನೋದು ಭಕ್ತರ ನಂಬಿಕೆ.
ಪ್ಲೋ…
ಈ ದೇವಸ್ಥಾನದ ಹಿನ್ನೆಲೆ ಬಹಳ ಕುತೂಹಲಕಾರಿಯಾಗಿದೆ. ಈ ಮಂದಿರವನ್ನು ನಿರ್ಮಾಣ ಮಾಡಿದ್ದು ಒಬ್ಬ ಅಗಸ. ಈ ಹಿಂದೆ ನರಸಿಂಹಸ್ವಾಮಿಯು ಹುತ್ತವೊಂದರಲ್ಲಿ ನೆಲೆಸಿದ್ದರಂತೆ. ವಿಷ್ಣುವಿನ ಭಕ್ತನಾಗಿದ್ದ ಅಗಸನ ಕನಸಿನಲ್ಲಿ ಬಂದ ನರಸಿಂಹಸ್ವಾಮಿ, ತಾನು ಹುತ್ತದಲ್ಲಿ ನೆಲೆಸಿರೋದಾಗಿ ಹೇಳುತ್ತಾನೆ. ಅಷ್ಟೇ ಅಲ್ಲ ತನಗೊಂದು ಮಂದಿರ ನಿರ್ಮಿಸಬೇಕು ಎಂದು ಹೇಳಿದ್ದನಂತೆ. ಆದರೆ ತುಂಬಾ ಬಡವ. ಸ್ವಾಮಿ ನಾನೊಬ್ಬ ಬಡವ. ಮಂದಿರ ನಿರ್ಮಾಣ ಮಾಡುವಷ್ಟು ಹಣ ನನ್ನಲ್ಲಿಇಲ್ಲ ಎಂದು ದೇವರ ಮೊರೆ ಹೋಗುತ್ತಾನೆ. ಆಗ ನರಸಿಂಹಸ್ವಾಮಿ ಚಿಂತಸಬೇಡ ಮಗು, ನೀನು ಪ್ರತಿದಿನ ಬಟ್ಟೆ ಒಗೆಯುವ ಕಲ್ಲಿನ ಕೆಳಗೆ ಹಣ ದೊರೆಯುತ್ತದೆ. ಆ ಹಣದಿಂದಲೇ ದೇವಸ್ಥಾನ ನಿರ್ಮಾಣ ಮಾಡು ಎಂದು ಹೇಳಿದ್ದರಂತೆ. ಅದೇ ರೀತಿ ಅಗಸನಿಗೆ ಹಣ ದೊರೆತು ಆತ ಮಂದಿರವನ್ನು ನಿರ್ಮಾಣ ಮಾಡುತ್ತಾನೆ. ಇದರಿಂದ ಸಂತೋಷಗೊಂಡ ನರಸಿಂಹಸ್ವಾಮಿ ಅಗಸನಿಗೆ ಬೇಕಾದ ವರವನ್ನು ಕೇಳು ಎಂದು ಹೇಳುತ್ತಾರೆ. ಆಗ ಅಗಸ ತಾನು ಮಾಡಿದ ಪಾಪ ಕರ್ಮಗಳನ್ನ ತೊಳೆದುಕೊಳ್ಳಲು ಕಾಶಿಗೆ ಹೋಗಬೇಕು ಎಂದು ಕೇಳಿಕೊಳ್ಳುತ್ತಾನೆ. ಆಗ ನರಸಿಂಹಸ್ವಾಮಿ ನೀನು ಕಾಶಿಗೆ ಹೋಗುವ ಅಗತ್ಯವಿಲ್ಲ. ಯಾರೇ ಭಕ್ತರು ಈ ಕ್ಷೇತ್ರಕ್ಕೆ ಬಂದರೆ ಅವರಿಗೆ ಕಾಶಿಗಿಂತ ಒಂದು ಗುಲಗಂಜಿಯಷ್ಟು ಹೆಚ್ಚು ಪುಣ್ಯ ದೊರೆಯುತ್ತದೆ ಎಂದು ಆಶೀರ್ವಾದ ಮಾಡುತ್ತಾರೆ. ಅವಾಗಿನಿಂದ ಈ ಕ್ಷೇತ್ರಕ್ಕೆ ದಕ್ಷಿಣ ಕಾಶಿಯಂತಲೂ ಕರೆಯುತ್ತಾರೆ.
ಮತ್ತೊಂದು ಇಂಟ್ರೆಸ್ಟಿಂಗ್ ಸಂಗತಿ ಅಂದ್ರೆ ಈ ದೇವಾಲಯದ ಹೊಸ್ತಿಲು, ಅಗಸನ ಬಟ್ಟೆ ಒಗೆಯುವ ಕಲ್ಲು. ಕಲ್ಲಿನ ಮೇಲೆ ಇರುವ ಚಿತ್ರ ಆ ಅಗಸನದೆಂದು ನಂಬಿಕೆ ಇದೆ. ಬಂಧು ಮಿತ್ರರೇ, ಇದಾಗಿತ್ತು ಇಂದಿನ ದಿಗ್ದರ್ಶನದ ವಿಶೇಷತೆಯ ಅನಾವರಣ. ಮತ್ತೊಂದು ವಿಶೇಷತೆಯ ಅನಾವರಣದೊಂದಿಗೆ ದಿಗ್ದರ್ಶನದ ಸಂಚಿಕೆ ಹೊತ್ತು ನಿಮ್ಮ ಮುಂದೆ ತೆರೆದಿಡುತ್ತೇವೆ.