ಮೈಸೂರು: ಐಪಿಎಲ್ ಪಂದ್ಯ ಇಂದಿನಿಂದ ಆರಂಭವಾಗಲಿದ್ದು, ಆರ್ ಸಿಬಿ ಅಭಿಮಾನಿಗಳು ಈ ಬಾರಿಯೂ ಕಪ್ ನಮ್ಮದೇ ಎನ್ನುತ್ತಿದ್ದಾರೆ.
ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಈ ಸಲ ಕಪ್ ನಮ್ಮದೇ ಎಂದು ಘೋಷಣೆ ಕೂಗುತ್ತಿದ್ದಾರೆ. ಭಿನ್ನ ವಿಭಿನ್ನವಾಗಿ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.
ಈಗ ಮೈಸೂರಿನ ಅಭಿಮಾನಿಯೊಬ್ಬ ವಿನೂತನವಾಗಿ ಶುಭ ಹಾರೈಸಿದ್ದಾನೆ. ಮೈಸೂರು ತಾಲೂಕು ದಾಸನಕೊಪ್ಪಲು ಗ್ರಾಮದ ಯೋಗೇಶ್ ಎಂಬುವವರು ತಮ್ಮ ಸ್ನೇಹಿತರೊಂದಿಗೆ ಸೇರಿ ಆರ್ ಸಿಬಿ ತಂಡಕ್ಕೆ ಶುಭ ಕೋರಿದ್ದಾರೆ.