ಕೋಲಾರ: ಈ ಬಾರಿ ಬಿಗ್‌ಬಾಸ್‌ನಲ್ಲಿ ಗಿಲ್ಲಿ ನಟನೇ ಗೆದ್ದು ಬರಲಿ ಎಂದು ಮಾಲೂರು ಶಾಸಕ ನಂಜೇಗೌಡ ಹಾಗೂ ಕೋಲಾರದ ಯುವಕರು, ಅಲ್ಲಿನ ಅಭಿಮಾನಿಗಳು ಶುಭಹಾರೈಸಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ನಂಜೇಗೌಡ, ಗಿಲ್ಲಿ ಮಂಡ್ಯ ಜಿಲ್ಲೆಯ ಸಣ್ಣ ಹಳ್ಳಿಯ ರೈತರ ಕುಟುಂಬದಿಂದ ಬಂದಿರುವ ಹಳ್ಳಿ ಪ್ರತಿಭೆ. ಈ ಬಾರಿ ಬಿಗ್‌ಬಾಸ್‌ನಲ್ಲಿ ಗಿಲ್ಲಿ ಗೆದ್ದು ಬರಬೇಕು. ಸಹಜ ಕಲೆಯಿಂದಲೇ ಪ್ರಖ್ಯಾತಿ ಪಡೆದಿರುವ ಗಿಲ್ಲಿ ನಟ ಗೆಲ್ಲಲಿ, ರಾಜ್ಯ, ದೇಶ, ವಿದೇಶಗಳಿಂದಲೂ ಗಿಲ್ಲಿಗೆ ಶುಭ ಹಾರೈಕೆ ಬರುತ್ತಿದೆ ಎಂದಿದ್ದಾರೆ.
ಇನ್ನೂ ಗಿಲ್ಲಿ ನಟನಿಗೆ ಕೋಲಾರದ ಯುವಕರು ಶುಭ ಹಾರೈಸಿದ್ದು, ಕೋಲಾರದ ಹೊಸ ಬಸ್ ನಿಲ್ದಾಣದ ಬಳಿ ಗಿಲ್ಲಿ ನಟನ ದೊಡ್ಡ ಭಾವಚಿತ್ರ ಹಾಕಿ, ಪಟಾಕಿ ಸಿಡಿಸಿದ್ದಾರೆ. ಬಿಗ್‌ಬಾಸ್‌ನಲ್ಲಿ ಗಿಲ್ಲಿ ಗೆಲ್ಲಬೇಕು ಎನ್ನುವುದು ನಮ್ಮೆಲ್ಲರ ಹಾರೈಕೆ, ಗಿಲ್ಲಿ ನಟನಿಗೆ ಒಳ್ಳೆಯದಾಗಲಿ ಎಂದು ಶುಭ ಕೋರಿದ್ದಾರೆ.
ಇಂದು ನಡೆಯುವ ಗ್ರ್ಯಾಂಡ್ ಫೀನಾಲೆಯಲ್ಲಿ ಗಿಲ್ಲಿ ನಟ ವಿಜೇತರಾಗಬೇಕು, ಡಮಾಲ್ ಡಿಮಿಲ್ ಡಕ್ಕ, ಗಿಲ್ಲಿ ಗೆಲ್ಲೋದು ಪಕ್ಕಾ ಎಂದು ಘೋಷಣೆ ಕೂಗಿ ಯುವಕರು, ಅಭಿಮಾನಿಗಳು ವಿಶ್ ಮಾಡಿದ್ದಾರೆ



















