ಟಾಲಿವುಡ್ ನ ಮೆಗಾ ಸ್ಟಾರ್, ಸುಪ್ರೀಂ ಹೀರೋ, ಮೆಗಾಸ್ಟಾರ್ ಚಿರಂಜೀವಿ ಸಿನಿಮಾ ರಂಗದಲ್ಲಿ ಯಾವಾಗಲೂ ಚಿರಂಜೀವಿ ಆಗಿಯೇ ಉಳಿಯುವಂತೆ ಹೆಸರು ಮಾಡಿದವರು. ಅವರು ಚಿತ್ರರಂಗಕ್ಕೆ ಕಾಲಿಟ್ಟು 40 ವರ್ಷಗಳು ಕಳೆದರೂ ಇಂದಿಗೂ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ. ಈ ಮಧ್ಯೆ ಅವರ ಸಿನಿಮಾ ಬಗ್ಗೆ ಒಂದು ಕುತೂಹಲಕಾರಿ ಸಂಗತಿ ಹೊರ ಬಿದ್ದಿದೆ.
ಚಿರಂಜೀವಿ ಸುಮಾರು 160 ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಬಹುತೇಕ ಚಿತ್ರಗಳು ಹಿಟ್ ಆಗಿವೆ. ಕೆಲವು ಫ್ಲಾಪ್ ಆಗಿವೆ. ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳಾಗಿ ಮಿಂಚಿವೆ. ಹೀಗೆ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡ ಚಿರಂಜೀವಿ ಇಂದಿಗೂ ಅಭಿಮಾನಿಗಳ ಆರಾಧ್ಯ ದೈವವಾಗಿದ್ದಾರೆ.
ಅವರ ವಾರಸುದಾರರಾಗಿ ಇಂಡಸ್ಟ್ರಿಗೆ ಬಂದ ರಾಮ್ ಚರಣ್ ಕೂಡ ಅವರನ್ನು ಇನ್ಸ್‌ಪ್ರೆಷನ್ ಆಗಿ ತೆಗೆದುಕೊಂಡು ಬೆಳೆಯುತ್ತಿದ್ದಾರೆ. ಹಲವರು ಚಿರಂಜೀವಿ ಅವರನ್ನೇ ನಟನೆಯ ಗುರುವಾಗಿ ಸ್ವೀಕರಿಸಿದ್ದಾರೆ. ಮೆಗಾ ಫ್ಯಾಮಿಲಿಯಿಂದ ಅರ್ಧ ಡಜನ್‌ಗಿಂತ ಹೆಚ್ಚು ಹೀರೋಗಳು ಇಂಡಸ್ಟ್ರಿಯಲ್ಲಿ ಇದ್ದಾರೆ. ಇಂತಹ ನಾಯಕ ನಟನ ಚಿತ್ರ ಕೂಡ ರಿಲೀಸ್ ಆಗದೆ ಹಾಗೆ ಉಳಿದಿರುವ ವಿಷಯ ಕೂಡ ಇದೆ. ಇದನ್ನು ಕೇಳಿ ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ. ಹಲವರಂತೂ ಅದನ್ನೂ ರಿಲೀಸ್ ಮಾಡಿ ಬಿಡಿ, ನೋಡಿ ಬಿಡ್ತೀವಿ ಅಂತಿದ್ದಾರೆ.
ಶೂಟಿಂಗ್ ಎಲ್ಲಾ ಕಂಪ್ಲೀಟ್ ಆಗಿ ಪೋಸ್ಟ್ ಪ್ರೊಡಕ್ಷನ್ ವರ್ಕ್ಸ್ ಕೂಡ ಮುಗಿದ ನಂತರ ರಿಲೀಸ್ ಆಗದೆ ನಿಂತು ಹೋಗಿರುವ ಸಿನಿಮಾ ಯಾವುದಂದ್ರೆ, ಶಾಂತಿ ನಿವಾಸಂ. ಚಿರಂಜೀವಿ – ಮಾಧವಿ ಹೀರೋ, ಹೀರೋಯಿನ್ ಆಗಿ ನಟಿಸಿದ ಈ ಸಿನಿಮಾಗೆ ಬಾಬು ನಿರ್ದೇಶನ ಮಾಡಿದ್ದಾರೆ. ಆದರೆ, ಈ ಸಿನಿಮಾ ಮಾತ್ರ ಬಿಡುಗಡೆಯಾಗಲಿಲ್ಲ.
ಈ ಚಿತ್ರ ಯಾವುದೇ ಬೇರೆ ಕಾರಣಕ್ಕೆ ನಿಂತಿಲ್ಲ. ಬದಲಾಗಿ ನಿರ್ಮಾಪಕರ ಕಾರಣದಿಂದ ನಿಂತು ಹೋಗಿದೆ ಎನ್ನಲಾಗಿದೆ. ಈ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದದಾಗ ಇದ್ದಕ್ಕಿದ್ದಂತೆ ನಿರ್ಮಾಪಕರು ನಿಧನರಾಗಿದ್ದಾರೆ. ಅದರಿಂದ ಈ ಸಿನಿಮಾ ರಿಲೀಸ್ ನಿಂತು ಹೋಗಿದೆ. ಆ ನಂತರವಾದರೂ ಈ ಸಿನಿಮಾವನ್ನು ಬಿಡುಗಡೆ ಮಾಡಬಹುದು ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು. ಆದರೆ ಸೆಂಟಿಮೆಂಟ್ ಆಗಿ ಬ್ಯಾಡ್ ಫೀಲ್ ಆದರೋ ಏನೋ ಶಾಂತಿ ನಿವಾಸಂ ರಿಲೀಸ್ ಮಾಡಲು ಯಾರೂ ಮುಂದೆ ಬರಲಿಲ್ಲ ಎನ್ನಲಾಗಿದೆ.
ಈಗ ಯಂಗ್ ಡೈರೆಕ್ಟರ್ ವಶಿಷ್ಠ ಜೊತೆಗೂಡಿ ವಿಶ್ವಂಭರ ಮೂವಿಯಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಆನಂತರ ಶ್ರೀಕಾಂತ್ ಓದೆಲ್ ಜೊತೆ ಕೈ ಜೋಡಿಸಲಿದ್ದಾರೆ ಎಂದು ತಿಳಿದು ಬಂದಿದೆ.