ಬೆಂಗಳೂರು: ಅಸ್ತಿ ತೆರಿಗೆ ಕಟ್ಟಲು ಈ ತಿಂಗಳು 31 ಕೊನೆಯ ದಿನವಾಗಿದ್ದು, ಒಂದು ವೇಳೆ ಬಾಕಿ ಅಸ್ತಿ ತೆರಿಗೆ ಕಟ್ಟದಿದ್ದರೆ ಡಬಲ್ ಕಟ್ಟಬೇಕಾಗುತ್ತದೆ. ಇದೇ ತಿಂಗಳು ಕೊನೆಯಾಗಿರುವುದರಿಂದ ರಜೆ ಇದ್ದರೂ ಬಿಬಿಎಂಪಿ ಕಚೇರಿಗಳನ್ನು ತೆರೆದಿಡಲು ನಿರ್ಧರಿಸಲಾಗಿದೆ.
ಏಪ್ರಿಲ್ ಒಂದರಿಂದ ಡಬಲ್ ತೆರಿಗೆ ಕಟ್ಟಬೇಕಾಗುತ್ತದೆ. ಈ ತಿಂಗಳು 30 ಹಾಗೂ 31ರಂದು ಸರ್ಕಾರಿ ರಜೆ ಇದ್ದರೂ ಕಚೇರಿ ಓಪನ್ ಮಾಡಲು ಬಿಬಿಎಂಪಿ ಮುಂದಾಗಿದೆ. ಮಾರ್ಚ್ 30ರಂದು ಯುಗಾದಿ, 31ರಂದು ರಂಜಾನ್ ಇದೆ. ಹೀಗಾಗಿ ಸರ್ಕಾರಿ ರಜೆ ಇವೆ. ಸರ್ಕಾರಿ ರಜೆ ಇದ್ದರೂ ತೆರಿಗೆ ಕಟ್ಟಲು ಕೊನೆಯ ದಿನ ಇರುವ ಹಿನ್ನೆಲೆಯಲ್ಲಿ ಕಚೇರಿ ತೆರೆದಿಡಲು ಬಿಬಿಎಂಪಿ ನಿರ್ಧರಿಸಿದೆ.
ಅಸ್ತಿ ಮಾಲೀಕರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಮಾರ್ಚ್ 30 ಹಾಗೂ 31ರಂದು ಕೂಡ ಕಚೇರಿಗಳು ಓಪನ್ ಆಗಿರುತ್ತವೆ. ಸರ್ಕಾರಿ ರಜೆಯ ದಿನದಂದೂ ಕಂದಾಯ ವಿಭಾಗದ ಎಲ್ಲಾ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಕಡ್ಡಾಯವಾಗಿ ಕಚೇರಿಗೆ ಬರಬೇಕು. ಇಲ್ಲವಾದರೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ವಿಭಾಗದ ವಿಶೇಷ ಅಯುಕ್ತರು ಹೇಳಿದ್ದಾರೆ. ಹೀಗಾಗಿ ಜನರು ಕಚೇರಿಗೆ ಆಗಮಿಸಿ, ತಮ್ಮ ತೆರಿಗೆ ಕಟ್ಟಬಹುದು.