ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಸಂಸ್ಥೆಯು ದೇಶದ ಕೋಟ್ಯಂತರ ಜನರ ವಿಶ್ವಾಸ ಗಳಿಸಿದೆ. ಈಗ ಎಲ್ಐಸಿಯಲ್ಲೂ ಹೊಸ ಹೊಸ ಯೋಜನೆಗಳು ಜಾರಿಗೆ ಬರುತ್ತಿವೆ. ಅದರಲ್ಲೂ, ಒಮ್ಮೆ ಮಾತ್ರ ಹೂಡಿಕೆ ಮಾಡಿ, ಜೀವನ ಪೂರ್ತಿ ಮಾಸಿಕ 10 ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದಾದ ಎಲ್ಐಸಿ ಜೀವನ್ ಶಾಂತಿ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಕುರಿತ ಮಾಹಿತಿ ಇಲ್ಲಿದೆ.
10 ಸಾವಿರ ರೂ. ಪಿಂಚಣಿ ಹೇಗೆ?
ಎಲ್ಐಸಿಯ ನ್ಯೂ ಜೀವನ್ ಶಾಂತಿ ಯೋಜನೆ ಅನ್ವಯ ನೀವು ಒಮ್ಮೆಯೇ 10 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು. ಒಮ್ಮೆಯೇ ಪ್ರೀಮಿಯಂ ಪಾವತಿಸಿದರೆ 10 ವರ್ಷಗಳ ನಂತರ ಪಿಂಚಣಿ ದೊರೆಯುತ್ತದೆ. ಈ ಯೋಜನೆಯು ಮಾಸಿಕ ಪಿಂಚಣಿಯ ಜತೆಗೆ ವಿಮಾ ರಕ್ಷಣೆನಯನ್ನೂ ಒದಗಿಸುತ್ತದೆ. ಪಾಲಿಸಿಯನ್ನು ಖರೀದಿಸಿದ 11ನೇ ವರ್ಷದಿಂದ ವಾರ್ಷಿಕ 1.20 ಲಕ್ಷ ರೂ. ಪಿಂಚಣಿ ಪಡೆಯಬಹುದು. ಅಂದರೆ, ಪ್ರತಿ ತಿಂಗಳು 10 ಸಾವಿರ ರೂ. ಸಿಗುತ್ತದೆ.
25 ಸಾವಿರ ರೂ. ಪಿಂಚಣಿ ಪಡೆಯಬಹುದು
ಎಲ್ಐಸಿಯ ನ್ಯೂ ಜೀವನ್ ಶಾಂತಿ ಯೋಜನೆ ಅನ್ವಯ ಮಾಸಿಕ 25 ಸಾವಿರ ರೂಪಾಯಿ ಪಿಂಚಣಿ ಪಡೆಯುವ ಸೌಲಭ್ಯವೂ ಇದೆ. ಅಂದರೆ, ನೀವು 10 ವರ್ಷಗಳವರೆಗೆ 25 ಲಕ್ಷ ರೂಪಾಯಿ ಠೇವಣಿ ಇರಿಸಿದರೆ, ವರ್ಷಕ್ಕೆ 3 ಲಕ್ಷ ರೂಪಾಯಿ ಅಥವಾ ಮಾಸಿಕ 25 ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದಾಗಿದೆ.
ಗಮನಿಸಿ: ನಾವು ನಿಮಗೆ ಎಲ್ಐಸಿ ಯೋಜನೆಯ ಹೂಡಿಕೆ ಬಗ್ಗೆ ಮಾಹಿತಿಯನ್ನಷ್ಟೇ ನೀಡಿದ್ದೇವೆ. ಇದು ನೀವು ಹೂಡಿಕೆ ಮಾಡುವ ಕುರಿತು ನಾವು ಮಾಡುತ್ತಿರುವ ಶಿಫಾರಸು ಅಲ್ಲ. ಯಾವುದೇ ರೀತಿಯ ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ-ಸೂಚನೆ ಪಡೆಯಿರಿ. ಮಾಹಿತಿ ದೃಷ್ಟಿಗಾಗಿ ಮಾತ್ರ ಲೇಖನ ಪ್ರಕಟಿಸಲಾಗಿದೆ ಅಷ್ಟೆ.: