ಬೆಂಗಳೂರು: ಇದು ಬ್ರೇಕ್ ಫಾಸ್ಟ್ ಮೀಟಿಂಗ್ ಅಲ್ಲ, ಬ್ರೇಕ್ ಮೀಟಿಂಗ್ ಅಲ್ಲಿ ಏನು ನಡಿಯುವುದಿಲ್ಲ. ಅಲ್ಲಿ ಇಡ್ಲಿನು ಇಲ್ಲ, ದೋಸೆನು ಇಲ್ಲ, ಅಲ್ಲಿ ಬರಿ ಜಗಳ ಬಿಟ್ಟರೆ ಬೇರೇನೂ ನಡಿಯುವುದಿಲ್ಲ ಎಂದು ವಿರೋಧ ಪಕ್ಷ ನಾಯಕ ಆರ್.ಅಶೋಕ್ ಹೇಳೀದ್ದಾರೆ.
ಸಿಎಂ ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಇದು ಮುಖ್ಯಮಂತ್ರಿ ಪದವಿ ಬಿಡುವ ವಿಚಾರವಾಗಿದ್ದು, ಸಿದ್ದರಾಮಯ್ಯನವರು ಬಿಡುವುದಕ್ಕೆ ರೆಡಿ ಇಲ್ಲ. ಡಿ.ಕೆ.ಶಿವಕುಮಾರ್ ಅವರು ನನಗೆ ಎರಡುವರೆ ವರ್ಷ ಎಂದು ಮಾತಾಗಿದೆ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್‌ನ ಕೇಂದ್ರದ ನಾಯಕರಿಗೆ ದಮ್ಮಿದ್ದರೆ ಅವರು ಅನೌನ್ಸ್ ಮಾಡಬೇಕು ಎರಡುವರೆ ವರ್ಷ ಒಪ್ಪಂದ ಎಂದು. ಅದನ್ನು ನಾವು ತೀರ್ಮಾನ ಮಾಡುತ್ತೇವೆ ಎಂದು ಅವರು ಹೇಳಬೇಕಿತ್ತು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಫಾರಿನ್ ಹೋಗಿದ್ದರು. ಅವರಿಗೆ ಜವಾಬ್ದಾರಿ ಇಲ್ಲ ಒಂದು ಫ್ಯಾಮಿಲಿಗಾಗಿ ಕಾಂಗ್ರೆಸ್ ಪಾರ್ಟಿ ಇದೆ. ಸುರ್ಜವಾಲ ಪತ್ತೆ ಇಲ್ಲ, ಎಲೆಕ್ಷನ್ ಟೈಮಲ್ಲಿ ಬರಿ ಆಶ್ವಾಸನೆಗಳನ್ನು ಕೊಟ್ಟಿದ್ದು. ನಮ್ಮ ಸರ್ಕಾರ ಸುಭದ್ರ ಸರ್ಕಾರ ಎಂದು. ಯಾವುದು ಸುಭದ್ರ ಸರ್ಕಾರ ಒಂದು ವರ್ಷದಿಂದ ಯಾವುದೇ ಡೆವಲಪ್ಮೆಂಟ್ ಇಲ್ಲ ಎಂದು ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ರಸ್ತೆ ಗುಂಡಿಗಳಿಂದ ಕೂಡಿದೆ, ಜೈಲುಗಳಲ್ಲಿ ಬಾರ್ ನಡಿತಾ ಇದೆ. ಇಷ್ಟು ಆದರೂ ಸರ್ಕಾರ ಏನು ಮಾಡುತ್ತಾ ಇಲ್ಲ ಎಂದರೆ ಸತ್ತು ಹೋಗಿದೆ ಎಂದರ್ಥ. ಕೇಂದ್ರದ ಕಾಂಗ್ರೆಸ್ ನಾಯಕರು ವೀಕ್ ಆಗಿದ್ದಾರೆ. ಇದರ ಅಡ್ವಾಂಟೇಜ್‌ನ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ತಗೊಂಡು ಸವಾರಿ ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಇದು ಹಂಡ್ರೆಡ್ ಪರ್ಸೆಂಟ್ ಬ್ರೇಕ್ ಫಾಸ್ಟ್ ಮೀಟಿಂಗ್ ಅಲ್ಲ ಬ್ರೇಕ್ ಹಾಕುವ ಮೀಟಿಂಗ್ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಸಿಎಂ-ಡಿಸಿಎಂ ಬ್ರೇಕ್ಫಾಸ್ಟ್ ಮೀಟಿಂಗ್ ; ಸಭೆ ನಂತರ ಜಂಟಿ ಸುದ್ದಿಗೋಷ್ಠಿ ಸಾಧ್ಯತೆ!



















