ಧಾರವಾಡ : ಸೋಮವಾರದಿಂದ ಮುಂಗಾರು ಅಧಿವೇಶನ ಆರಂಭವಾಗಲಿದೆ. ಈ ಕುರಿತು ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಪ್ರತಿಕ್ರಿಯೆ ನೀಡಿದ್ದಾರೆ.
ವರದಿಗಾರರಿಗೆ ಸ್ಪಂದಿಸಿದ ಬೆಲ್ಲದ್, ಆರ್‌ಸಿಬಿ ಕಾಲ್ತುಳಿತ, ಒಳಮೀಸಲಾತಿ, ರೈತರ ಗೊಬ್ಬರದ ಅನ್ಯಾಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರಸ್ತಾಪ ಮಾಡುತ್ತೇವೆ ಎಂದು ಹೇಳಿದರು.
ಸರ್ಕಾರದ ಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತಿದೆ. ಗುತ್ತಿಗೆದಾರರ ಹಣ ಕೊಟ್ಟಿಲ್ಲ. ಗ್ಯಾರಂಟಿಗಳು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಈ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಹಿಂದಿನ ಸರ್ಕಾರದ ಕೆಲಸ ಈ ಸರ್ಕಾರದಲ್ಲಿ ಮುಂದುವರೆದಿರುತ್ತವೆ. ಹಿಂದಿನ ಸರ್ಕಾರ ಮಾಡದೇ ಇರುವ ಪೆಮೆಂಟ್ ಈ ಸರ್ಕಾರ ಮಾಡಬೇಕು ಎಂದಿದ್ದಾರೆ.
ಈ ಸರ್ಕಾರ ಅಧಿಕಾರದಿಂದಿಳಿಯುವಾಗ ಪೆಮೆಂಟ್ ಬಾಕಿ ಉಳಿಸಿ ಹೋಗುತ್ತದೆ. ಅದನ್ನು ಮುಂದಿನ ಸರ್ಕಾರ ಕೊಡಬೇಕಾಗುತ್ತದೆ. ಹಿಂದೆ ಇದೇ ಸರ್ಕಾರ ಸಾವಿರಾರು ಕೋಟಿ ಬಾಕಿ ಇಟ್ಟಿದ್ದರು. ಅದನ್ನು ನಾವು ಪಾವತಿಸಿದ್ದೆವೆ. ಹಿಂಬಾಕಿಯನ್ನು ಈ ಸರ್ಕಾರವೇ ಬಿಡುಗಡೆಗೊಳಿಸಬೇಕು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಅರವಿಂದ ಬೆಲ್ಲದ್ ಕಿಡಿಕಾರಿದ್ದಾರೆ.