ಚಿತ್ರದುರ್ಗ: ಪ್ರತಿ ಗ್ರಾಮದಲ್ಲಿ ಬಡವರು, ವೃದ್ಧರು, ಮಹಿಳೆಯರು ಕಣ್ಣೀರು ಹಾಕ್ತಿದಾರೆ. ಯಾವ ಕಾರಣಕ್ಕೆ ಪ್ರತಿ ತಾಲೂಕಲ್ಲಿ 8-10 ಸಾವಿರ ಜನರಿಗೆ ಪಿಂಚಣಿ ಬಂದ್ ಮಾಡಿದೆ ಈ ಕಾಂಗ್ರೆಸ್ ಸರ್ಕಾರ, ಎಂದು ಸಂಸದ ಗೋವಿಂದ ಕಾರಜೋಳ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಿಂದ ಕಾರಜೋಳ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಧ್ಯ ಸುರಕ್ಷಾ ಯೋಜನೆ ಜಾರಿ ಮಾಡಿದ್ರು. ಮುಪ್ಪಿನವಸ್ಥೆಯಲ್ಲಿ ಬಡವರು ಸುಖದಿಂದ ಇರಬೇಕೆಂಬ ಉದ್ದೇಶದಿಂದ ಜಾರಿಗೊಳಿಸಿದ್ರು. ಇಂದಿರಾ ಗಾಂಧಿ ಹೆಸರಿನಲ್ಲೂ ಈ ವೃದ್ಧಪ್ಯ ವೇತನ ಕೊಡ್ತಿದ್ರು. ಆದರೆ ಸಿದ್ಧರಾಮಯ್ಯ ಸರ್ಕಾರ ಬಂದು ಪಿಂಚಣಿ ಕ್ಯಾನ್ಸಲ್ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಡವರು ಮಂಜೂರಾತಿ ಪತ್ರ ಹಿಡಿದು ಬೀದಿ ಬೀದಿ ಅಲೀತಿದ್ದಾರೆ. ದೇವದಾಸಿಯರ ಪಿಂಚಣಿ ಹಣ ಕೂಡ ನಿಂತು ಹೋಗಿದೆ. ಇದು ದೊಡ್ಡ ದುರಂತದ ಸಂಗತಿ. ಈಗ ಅವರಿಗೆ ಬಿಕ್ಷೆ ಬೇಡುವ ಸ್ಥಿತಿ ಒಂದೇ ಉಳಿದಿರೋದು. ಕೂಡಲೇ ವೃದ್ಧರಿಗೆ ವೃದ್ಧಾಪ್ಯ ವೇತನ ಬರುವಂತೆ ಮಾಡಿ. ನ್ಯೂನ್ಯತೆ ಸರಿಪಡಿಸಿ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರ ದುರಂತಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ | ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ



















