ಬೆಂಗಳೂರು : ಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಂದು ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವ ಕೆಲಸ ಮಾಡಬೇಕಿದೆ. ಇಲ್ಲಿರುವ ಎಲ್ಲರು ಮನಸ್ಸು ಮಾಡಿದ್ರೆ ಅದೇನು ಕಷ್ಟ ಅಲ್ಲ, ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ನನಗೆ ನೂರಕ್ಕೆ ನೂರರಷ್ಟು ವಿಶ್ವಾಸ ಇದೆ. ಅಭಿವೃದ್ಧಿ ಪರವಾದ ಸರ್ಕಾರ ತರಲು ನೀವು ಸಿದ್ದರಿದ್ದೀರಾ ಅದನ್ನೇ ನಿಮ್ಮಲ್ಲಿ ನಾನು ನೋಡ್ತಿದ್ದೇನೆ. ಸಾಧನೆ ಮಾತಡಬೇಕು, ಮಾತಾಡೋದೇ ಸಾಧನೆ ಆಗಬಾರದು ಎಂದು ಹೇಳಿದ್ದಾರೆ.
ನಮಗೆ ಆದರ್ಶ ಈ ದೇಶ ಪ್ರಧಾನ ಮಂತ್ರಿಗಳು. ಅವರು ಒಂದು ದಿನವೂ ವಿಶ್ರಾಂತಿ ಪಡೆದಿಲ್ಲ. ಇಡೀ ವಿಶ್ಚವೇ ಮೆಚ್ಚುವಂತ ಕೆಲಸ ಅವರು ಮಾಡ್ತಿದ್ದಾರೆ. ಇಂತಹ ಭ್ರಷ್ಟ ಸರ್ಕಾರ ಕಿತ್ತೊಗೆಯಲು ಯಾವುದೇ ಕಷ್ಟ ಇಲ್ಲ ನನಗೆ ಇವಾಗ 85ವರ್ಷ ನಾನು ಇವಾಗಲೂ ಇನ್ನೂ ಆರು ಏಳು ವರ್ಷ ರಾಜ್ಯದಲ್ಲಿ ಓಡಾಡಲು ಸಿದ್ದ. ನೀವು ಎಲ್ಲಿಗೆ ಕರೆಯುತ್ತೀರೋ ಅಲ್ಲಿಗೆ ನಾನು ಬರಲು ರೆಡಿ ಇದ್ದೇನೆ ಎಂದಿದ್ದಾರೆ.
ಈ ಭ್ರಷ್ಟ ಸರ್ಕಾರ ತೆಗೆದ್ರು ನಾವು ಅಧಿಕಾರಕ್ಕೆ ಬಂದರೆ ನಾವು ಇಲ್ಲಿ ಸೇರಿರೋದಕ್ಕೆ ಸಾರ್ಥಕ ಆಗುತ್ತದೆ. ಗುತ್ತಿಗೆದಾರರೇ ಹಣ ಬಿಡುಗಡೆ ಬಗ್ಗೆ ಮಾತಾಡಿದ್ದಾರೆ. ಹೀಗಾಗಿ ಇಂತಹ ಭ್ರಷ್ಟ ಸರ್ಕಾರ ವನ್ನು ಕಿತ್ತೊಗೆಯುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ : ರಣಜಿ ಸೆಮಿಫೈನಲ್‌ನಲ್ಲಿ ದೇವದತ್ ಪಡಿಕ್ಕಲ್ಗೆ ಗಾಯ | ಐಪಿಎಲ್‌ಗೂ ಮುನ್ನ ಆರ್‌ಸಿಬಿ ಪಾಳಯದಲ್ಲಿ ಆತಂಕ!



















