ಬೆಂಗಳೂರು: ಆರ್ ಸಿಬಿ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆರ್ಸಿಬಿ (RCB), ಕೆಎಸ್ಸಿಎ, ಡಿಎನ್ಎ ಕಂಪನಿ ವಿರುದ್ಧ ಮೂರನೇ ಎಫ್ ಐಆರ್ ದಾಖಲಾಗಿದೆ. ಬಿಕಾಂ ವಿದ್ಯಾರ್ಥಿ ಘಟನೆಯಲ್ಲಿ ಗಾಯಗೊಂಡಿದ್ದು, ದೂರು ದಾಖಲಿಸಿದ್ದಾರೆ.
ಸಿ.ವೇಣು ದೂರು ನೀಡಿರುವ ವಿದ್ಯಾರ್ಥಿಯಾಗಿದ್ದು, ಈ ದೂರಿನ ಹಿನ್ನೆಲೆಯಲ್ಲಿ ಎಪ್ ಐಆರ್ ದಾಖಲಿಸಲಾಗಿದೆ. ಆರ್ಸಿಬಿಯ ಉಚಿತ ಟಿಕೆಟ್ ಜಾಹೀರಾತು ನೋಡಿ ಕ್ರೀಡಾಂಗಣಕ್ಕೆ ಬಂದಿದ್ದೆ. ಕ್ರೀಡಾಂಗಣದ ಗೇಟ್ ನಂಬರ್ 6ರ ಬಳಿ ನೂಕುನುಗ್ಗಲು ಉಂಟಾಗಿತ್ತು. ನೂಕುನುಗ್ಗಲಿನಲ್ಲಿ ಬಲಗಾಲಿನ ಮೇಲೆ ಬ್ಯಾರಿಕೇಡ್ ಬಿದ್ದಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದೇನೆ ಎಂದು ದೂರು ದಾಖಲಿಸಿದ್ದಾರೆ.
ಕಾಲ್ತುಳಿತದಲ್ಲಿ ಗಾಯಗೊಂಡ ರೋಲನ್ ಗೊಮೆಸ್ ಎಂಬುವರು ದೂರು ನೀಡಿದ್ದರು. ಅಲ್ಲದೇ, ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ಗಿರೀಶ್ ದೂರು ನೀಡಿದ್ದ ದೂರಿನ ಆಧಾರದ ಮೇಲೆ ಮತ್ತೊಂದು ದೂರು ದಾಖಲಾಗಿತ್ತು. ಈಗ ಮೂರನೇ ದೂರು ದಾಖಲಾಗಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.