ಬೆಂಗಳೂರು : ಬೆಂಗಳೂರಿಗೆ ಮಹಿಳೆಯರ ದರೋಡೆ ಗ್ಯಾಂಗ್‌ಯೊಂದು ಎಂಟ್ರಿ ಕೊಟ್ಟಿದೆ. ಗುಂಪು ಕಟ್ಟಿಕೊಂಡು ಆರ್ಟಿಫಿಷಿಯಲ್ ಓಲೆ, ಸರ ಮಾರುವ ನೆಪದಲ್ಲಿ ಬಂದು ಅಪಾರ್ಟ್ಮೆಂಟ್‌ಗೆ ನುಗ್ಗಿ 40 ಸಾವಿರ ದುಡ್ಡು, ಚಿನ್ನ ಕಳ್ಳತನ ಮಾಡಿರುವ ಘಟನೆ ನಗರದ ಯಶವಂತಪುರ ಗೋಲ್ಡನ್ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ.
ಅಪಾರ್ಟ್ಮೆಂಟ್ ಒಳಗೆ ಹೋಗಲು ನಕಲಿ ಕಾರಣ ಹೇಳಿಕೊಂಡು ಬಂದಿದ್ದ ಕಳ್ಳಿಯರು, ಅಪಾರ್ಟ್ಮೆಂಟ್ ಮಹಿಳೆಯರಿಗೆ ಉತ್ತರ ಕರ್ನಾಟಕ ಶೈಲಿಯ ಆರ್ಟಿಫಿಷಲ್ ಒಡವೆಗಳನ್ನು ಮಾರಟ ಮಾಡೋದಾಗಿ ಹೇಳಿಕೊಂಡು ಬಂದ ಆರು ಜನ ಮಹಿಳೆಯರನ್ನ ಸೆಕ್ಯುರಿಟಿ ತಡೆದು ನಿಲ್ಲಿಸಿ ಒಳಗೆ ಬಿಡೋದಕ್ಕೆ ಆಗೋದಿಲ್ಲ ಎಂದಿದ್ದಾನೆ.
ಈ ವೇಳೆ ನಾಲ್ಕು ಜನ ಮಹಿಳೆಯರು ಸೆಕ್ಯುರಿಟಿ ಹತ್ತಿರ ಮಾತನಾಡ್ತಾ ಸೆಕ್ಯುರಿಟಿ ಗಮನ ಬೇರೆಡಿಗೆ ಸೆಳೆದಿದ್ದಾರೆ. ಉಳಿದ ಇಬ್ಬರು ಸೆಕ್ಯುರಿಟಿ ಕಣ್ಣು ತಪ್ಪಿಸಿ ಅಪಾರ್ಟ್ಮೆಂಟ್ ಎಂಟ್ರಿ ಕೊಟ್ಟು ಅಪಾರ್ಟ್ಮೆಂಟ್ ಗ್ರೌಂಡ್ ಫ್ಲೋರ್ ನಲ್ಲೆ ಇದ್ದ ಸೆಕ್ಯುರಿಟಿ ಮನೆಯಿಂದ ಚಿನ್ನ ಎಗರಿಸಿ ಕಳ್ಳಿಯರು ಪರಾರಿಯಾಗಿದ್ದಾರೆ. ಈ ಖರ್ತನಾಕ್ ಕಳ್ಳಿಯರ ಕೈಚಳಕ ಸಿಸಿ ಟಿವಿಯಲ್ಲಿ ಸರೆಯಾಗಿದೆ.
ಇದನ್ನೂ ಓದಿ : ಕ್ಯಾಲಿಫೋರ್ನಿಯಾದಲ್ಲಿ ಕನ್ನಡಿಗ ವಿದ್ಯಾರ್ಥಿ ನಾಪತ್ತೆ | 5 ದಿನ ಕಳೆದರೂ ಪತ್ತೆಯಾಗದ ಸಾಕೇತ್



















