ಖದೀಮರು ಕಸ ವಿಲೇವಾರಿ ಮಾಡುವ ವಾಹನವನ್ನೇ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಈ ಘಟನೆ ರಾಯಚೂರು ಜಿಲ್ಲೆಯ ಕವಿತಾಳ ಪಟ್ಟಣ ಪಂಚಾಯತಿಯಲ್ಲಿ ನಡೆದಿದೆ. ನಿನ್ನೆ ಮಧ್ಯರಾತ್ರಿ ಈ ಘಟನೆ ನಡೆದಿದೆ. ಪಂಚಾಯತಿ ಗೇಟ್ ಬೀಗ ಮುರಿದು ಖದೀಮರು ವಾಹನ ಕಳ್ಳತನ ಮಾಡಿದ್ದಾರೆ. ಸರ್ಕಾರದಿಂದ ಗ್ರಾಮ, ಪಟ್ಟಣ ಮತ್ತು ನಗರಸಭೆ, ಪುರಸಭೆಗಳಿಗೆ ಕಸ ವಿಲೇವಾರಿಗಾಗಿ ವಾಹನಗಳನ್ನು ಮಂಜೂರು ಮಾಡಲಾಗಿದೆ.
ಈ ವಾಹನಗಳು ಪ್ರತಿ ದಿನ ಮನೆ ಮನೆಗೆ ತೆರಳಿ ಕಸ ವಿಲೇವಾರಿ ಮಾಡುತ್ತವೆ. ಪಟ್ಟಣ ಪಂಚಾಯಿತಿಯಲ್ಲಿ ನಿಲ್ಲಿಸಲಾಗಿದ್ದ ವಾಹನವನ್ನೇ ಈಗ ಖದೀಮರು ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಕವಿತಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



















