ಚಿಕ್ಕಬಳ್ಳಾಪುರ : ಸರ್ಕಾರಿ ಕಛೇರಿ ಮುಂದೆಯೇ ಗಂಧದ ಮರಗಳನ್ನು ಕಳವು ಮಾಡಿ ಖದೀಮರು ಕೈಚಳಕ ತೋರಿರುವ ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಸರ್ಕಾರಿ ಪ್ರವಾಸಿ ಮಂದಿರ ಬಳಿ ನಡೆದಿದೆ.
ಪಿಡಬ್ಲ್ಯೂ ಕಛೇರಿ ಮುಂದೆ ಇರುವ ಪ್ರವಾಸಿ ಮಂದಿರದ ಬಳಿ ಇದ್ದ ಬೆಲೆ ಬಾಳುವ ಗಂಧದ ಮರಗಳನ್ನು ಕೊಯ್ದು ಹೊತ್ತೊಯ್ದಿದ್ದಾರೆ.
ಸರ್ಕಾರಿ ಸಂಬಂಧಿಸಿದ ಜಾಗದಲ್ಲೇ ಭದ್ರತೆಯ ಕೊರತೆ ಎದುರಾಗಿದ್ದು ಪ್ರವಾಸಿ ಮಂದಿರದ ಸಿಸಿ ಕ್ಯಾಮರಗಳು ಕೆಟ್ಟು ನಿಂತಿರು ಕಾರಣ ಕಳ್ಳರು ರಾಜಾರೋಷವಾಗಿ ತಮ್ಮ ಕೈಚಳಕ ತೋರಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಮೈಸೂರು | ಮಾಲೀಕನ ಮೇಲೆ ದರ್ಪ ತೋರಿ ಕಾಲಿನಿಂದ ಒದ್ದ ಮಹಿಳೆ



















