ಬೆಂಗಳೂರು: ರಾಜ್ಯದಲ್ಲಿ ರೇಷನ್ ಕಾರ್ಡ್ ಗೊಂದಲ ಜೋರಾಗಿತ್ತು. ಇದೇ ವಿಷಯ ಮುಂದಿಟ್ಟುಕೊಂಡು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಗುದ್ದಾಟ ನಡೆಸಿದ್ದವು. ಈಗ ಮತ್ತೆ ಸರ್ಕಾರ ಅರ್ಹ ಫಲಾನುಭವಿಗಳ ಕಾರ್ಡ್ ಗಳನ್ನು ಮತ್ತೆ ನೀಡಲು ಮುಂದಾಗಿದೆ.
ಆಧಾರ್, ಪ್ಯಾನ್ ಕಾರ್ಡ್, ಐಟಿ ರಶೀದಿ ಮುಂತಾದ ದಾಖಲೆಗಳ ಮೂಲಕ ಅರ್ಹತೆ ಪಡೆದವರು ಕಾರ್ಡ್ ಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಕೂಡ ನೀಡಲಾಗಿದೆ. ಎಪಿಎಲ್ ನಿಂದ ಬಿಪಿಎಲ್ ಗೆ ಬದಲಾಯಿಸಲು ಅಧಿಕಾರಿಗಳಿಗೆ ನವೆಂಬರ್ 28ರ ವರೆಗೆ ಅವಕಾಶ ನೀಡಲಾಗದೆ. ಈಗಾಗಲೇ ರಾಜ್ಯದಲ್ಲಿ ಶೇ 90 ರಷ್ಟು ಕಾರ್ಡ್ಗಳನ್ನು ಎಪಿಎಲ್ನಿಂದ ಬಿಪಿಎಲ್ ಮರುಸ್ಥಾಪನೆ ಮಾಡಲಾಗಿದೆ. ತೆರಿಗೆ ಪಾವತಿದಾರರಿಗೆ ಕೂಡ ಬಿಪಿಎಲ್ ಕಾರ್ಡ್ ಗಳಿದ್ದವು. ಸದ್ಯ ಅವುಗಳನ್ನು ಪತ್ತೆ ಹಚ್ಚಿ ದಂಡ ಹಾಕಲು ಸರ್ಕಾರ ಮುಂದಾಗಿದೆ.
NIC ತಂತ್ರಾಂಶ ಎಕ್ಸಪರ್ಟ್ಗಳ ಜೊತೆ ಆಹಾರ ಇಲಾಖೆ ಸಭೆ ನಡೆಸಿದ್ದು, ಬಿಪಿಎಲ್ ಕಾರ್ಡ್ ಮರು ಪರಶೀಲನೆಗೆ ಇದ್ದ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿದೆ. ಹೀಗಾಗಿ ಮುಂದಿನ ತಿಂಗಳಿಂದ ಪಡಿತರ ನೀಡಲು ಬೇಕಾದ ಎಲ್ಲ ವವಸ್ಥೆಗಳನ್ನು ಮಾಡಿಕೊಂಡಿದೆ. ರದ್ದಾದ ಎಲ್ಲ ಬಿಪಿಎಲ್ ಕಾರ್ಡ್ಗಳ ಮರು ಪರಶೀಲನೆಗೆ ಅಧಿಕಾರಿಗಳು ಮುಂದಾಗಿದ್ದಾರೆ.