ಬೆಂಗಳೂರು: ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ ಆರಂಭವಾಗುತ್ತದೆ. ಹಾಗಾಗಿ, ಹಣಕಾಸಿಗೆ ಸಂಬಂಧಿಸಿದಂತೆ ಪ್ರಮುಖ ನಿಯಮಗಳು ಕೂಡ ಬದಲಾಗುತ್ತಿವೆ. ಅದರಲ್ಲೂ, ಎಸ್ ಬಿಐ ಹಾಗೂ ಐಡಿಎಫ್ ಸಿ ಫಸ್ಟ್ ಬ್ಯಾಂಡ್ ಕ್ರೆಡಿಟ್ ಕಾರ್ಡ್ ನಿಯಮಗಳು (Credit Card Rules) ಬದಲಾಗುತ್ತಿವೆ. ಹಾಗಾಗಿ, ಈ ಎರಡು ಬ್ಯಾಂಕ್ ಗಳ ಕ್ರೆಡಿಟ್ ಕಾರ್ಡ್ ಹೊಂದಿರುವವರು ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ.
ಎಸ್ ಬಿಐ ಕಾರ್ಡ್ ನಲ್ಲಿ ಏನೆಲ್ಲ ಬದಲು?
- ಸಿಂಪ್ಲಿಕ್ಲಿಕ್ ಎಸ್ ಬಿಐ ಕ್ರೆಡಿಟ್ ಕಾರ್ಡ್ ಇದ್ದವರಿಗೆ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದಾಗ ಸಿಗುತ್ತಿದ್ದ 10X ಪಾಯಿಂಟ್ ಗಳ ಬದಲಾಗಿ ಇನ್ನು 5X ಪಾಯಿಂಟ್ ಗಳು ಸಿಗುತ್ತವೆ.
- ಏರ್ ಇಂಡಿಯಾ ಎಸ್ ಬಿಐ ಪ್ಲಾಟಿನಂ ಕ್ರೆಡಿಟ್ ಕಾರ್ಡ್ ಇದ್ದವರಿಗೆ ಪ್ರತಿ 100 ಖರ್ಚು ಮಾಡಿದಾಗ ಸಿಗುತ್ತಿದ್ದ 15 ರಿವಾರ್ಡ್ ಪಾಯಿಂಟ್ ಗಳು ಏಪ್ರಿಲ್ 1ರಿಂದ 5 ಪಾಯಿಂಟ್ ಗಳಿಗೆ ಇಳಿಕೆಯಾಗಲಿದೆ.
- ಸಿಗ್ನೇಚರ್ ಕಾರ್ಡ್ ಇದ್ದವರಿಗೆ ಪ್ರತಿ 100 ರೂ. ವ್ಯಯಿಸಿದಾಗ 30 ಪಾಯಿಂಟ್ ಗಳ ಬದಲಾಗಿ 10 ಪಾಯಿಂಟ್ ಗಳು ಮಾತ್ರ ಸಿಗುತ್ತವೆ.
- ಮಹತ್ವದ ಬದಲಾವಣೆಯೊಂದರಲ್ಲಿ ಎಸ್ ಬಿಐ ಕ್ರೆಡಿಟ್ ಕಾರ್ಡ್ ಇದ್ದವರಿಗೆ ಸಿಗುತ್ತಿದ್ದ ಉಚಿತ ವಿಮಾ ಸುರಕ್ಷತೆ ರದ್ದಾಗಲಿದೆ. ವಿಮಾನ ಅಪಘಾತಕ್ಕೆ 50 ಲಕ್ಷ ರೂ. ಹಾಗೂ ರೈಲ್ವೆ ಅಪಘಾತಕ್ಕೆ 10 ಲಕ್ಷ ರೂ. ವಿಮಾ ಸುರಕ್ಷತೆ ಇತ್ತು. ಇದನ್ನು ಎಸ್ ಬಿಐ ರದ್ದುಗೊಳಿಸುತ್ತಿದೆ.
ಐಡಿಎಫ್ ಸಿ ಫಸ್ಟ್ ಬ್ಯಾಂಕ್ ನಿಯಮಗಳಲ್ಲಿ ಏನೆಲ್ಲ ಬದಲು?
- ವಿಸ್ತಾರ ಕ್ರೆಡಿಟ್ ಕಾರ್ಡ್ ಕ್ಲಬ್ ವಿಸ್ತಾರದ ಸದಸ್ಯರಿಗೆ ಮೈಲ್ ಸ್ಟೋನ್ ಬೆನಿಫಟ್ಸ್ ಇರುವುದಿಲ್ಲ.
- 2026ರ ಮಾರ್ಚ್ 31ರವರೆಗೆ ಮಹಾರಾಜ ಪಾಯಿಂಟ್ಸ್ ಗಳು ಸಿಗಲಿವೆ
- ಐಡಿಎಫ್ ಫಸ್ಟ್ ಬ್ಯಾಂಕ್ ನಿಂದ ಕೂಡ ವಿಮಾ ಸುರಕ್ಷತೆ ರದ್ದು