ಬೆಂಗಳೂರಿಂದ ಪೋನ್ ಹೋಗಿದೆ. ಗೃಹ ಸಚಿವರೇ ಅಪರಾಧಿಗೆ ಕಾಲ್ ಮಾಡಿದ್ದಾರೆ. ಜನಾರ್ಧನ ರೆಡ್ಡಿಮೇಲೆ ಗುಂಡು ಹಾರಿಸಲು ಪೂರ್ವನಿಯೋಜಿತ ಪ್ಲಾನ್ ಆಗಿತ್ತು ಎಂದು ಆರ್ ಅಶೋಕ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಅಶೋಕ್ ಗೃಹ ಸಚಿವರೇ ಅಪರಾಧಿಗೆ ಕಾಲ್ ಮಾಡಿದ್ದಾರೆ. ಜನಾರ್ಧನ ರೆಡ್ಡಿಗೆ ಕಾಲ್ ಮಾಡಿ ಭದ್ರತೆ ಒದಗಿಸೋದಾಗಿ ಹೇಳಬೇಕಿತ್ತು. ಸಿದ್ದರಾಮಯ್ಯ ಗುಂಡುಹಾಕೊ ಸಂಸ್ಕೃತಿಗೆ ನಾಂದಿ ಹಾಡಿದ್ದಾರೆ. ಗೂಂಡಾ ರಾಜ್ಯ ಮಾಡಲು ನಾಂದಿ ಸಿಎಂಗೆ ನಾಚಿಕೆ ಆಗಬೇಕು. ತಕ್ಷಣ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ರೆಡ್ಡಿ ಮನೆ ಕಾಂಪೋಂಡ್ ಗೆ ಯಾಕೆ ಬ್ಯಾನರ್ ಕಟ್ಟಬೇಕಿತ್ತು ಎಂದು ಆಕ್ರೋಶಿಸಿದ್ದಾರೆ.
ಜನಾರ್ದನ ರೆಡ್ಡಿಮೇಲೆ ಗುಂಡು ಹಾರಿಸಲು ಪೂರ್ವನಿಯೋಜಿತ ಪ್ಲಾನ್ ಆಗಿತ್ತು. ಇದು ಎಲ್ಲ ಜಿಲ್ಲೆಗೆ ಹಬ್ಬುವ ಮೊದಲು ಕ್ರಮ ಆಗಬೇಕು. ಇಲ್ಲದಿದ್ದರೆ ಹೋರಾಟ ಮಾಡ್ತೇವೆ. ಆಂದ್ರ ಮಾದರಿ ರಾಜಕೀಯ ಮಾಡಲು ಹೊರಟಿದ್ದಾರೆ. ಸಿಎಂ ಖಂಡಿಸಬೇಕಿತ್ತು. ರೆಡ್ಡಿ ಮೇಲೆಯೇ ಕೇಸ್ ಹಾಕಿದ್ದಾರೆ ಇದರಿಂದಲೆ ಗೊತ್ತಾಗತ್ತೆ ಇದು ಪ್ರಿ ಪ್ಲಾನ್ ಎಂದು ಎಂದಿದ್ದಾರೆ.
ಬಳ್ಳಾರಿಯಲ್ಲಿ ಬಿಜೆಪಿ ಬಲಗೊಳ್ತಿದೆ. ರೆಡ್ಡಿ ರಾಮುಲು ಒಂದಾಗಿದ್ದಾರೆ. ಇದು ಕಾಂಗ್ರೆಸ್ ಗೆ ಸಹಿಸಲು ಆಗ್ತಿಲ್ಲ. ಹೀಗಾಗಿ ಜನಾರ್ದನ ರೆಡ್ಡಿ ಮುಗಿಸಲು ಸಂಚು ಹೂಡಿದ್ರು. ಜನಾರ್ದನ ರೆಡ್ಡಿಯವರನ್ನು ಟಾರ್ಗೆಟ್ ಮಾಡಿಯೇ ಗುಂಡು ಹಾರಿಸಿದ್ರು. ಅದು ಮಿಸ್ ಆಗಿ ಅವರ ಕಾರ್ಯಕರ್ತನಿಗೇ ತಗುಲಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಪ್ಯಾಕೆಟ್ ಹಾಲಿಗೆ ನೀರು ಬೆರೆಸಿ ಕುಡಿಸಿದೆವು ಅಷ್ಟೇ | 5 ತಿಂಗಳ ಹಸುಗೂಸಿನ ಪ್ರಾಣ ತೆಗೆದ ‘ವಿಷ’ ನೀರು



















