ಧಮ್ಕಿ ಹಾಕಿದ ಆರೋಪದ ಬಗ್ಗೆ ಒಳ್ಳೆ ಹುಡುಗ ಪ್ರಥಮ್ ರಿಯಾಕ್ಟ್ ಮಾಡಿದ್ದಾರೆ. ಘಟನೆ ನಡೆದಾಗ ತುಂಬಾ ಜನ ಫೋನ್ ಮಾಡಿದ್ರು. ವಿಷಯ ಹೊರಬರಬಾರದು ಎಂದು ಸುಮ್ಮನಿದ್ದೆ. ಲಾಯರ್ ಜಗದೀಶ್ ಲೈವ್ ಮಾಡಿದ, ಆ ಯಪ್ಪನ ಬಾಯಿ ಮುಚ್ಚಿಸೋಕೆ ಆಗುತ್ತಾ..? ರಕ್ಷಕ್ ನಾನು ಇಬ್ಬರು ಕ್ಲಿಯರ್ ಮಾಡಿಕೊಳ್ಳುತ್ತೀವಿ.
ನಮ್ಮ ಇಬ್ಬರ ನಡುವೆ ವೈಯಕ್ತಿಕ ದ್ವೇಷ ಇಲ್ಲ. ಸಿನಿಮಾದಲ್ಲೂ ರಾಜಕೀಯ ರಿಯಲ್ ರಾಜಕೀಯಕ್ಕಿಂತ ದೊಡ್ಡದಾಗಿರುತ್ತೆ. ಆದ್ರೆ ಪಕ್ಕದಲ್ಲಿದ್ದ ರಕ್ಷಕ್ ನಾನ್ ಮಾತನಾಡ್ತೀನಿ ಅಂತಾ ಒಂದು ಮಾತು ಹೇಳಿದ್ರೆ ಈ ರೀತಿ ಆಗ್ತಿರಲಿಲ್ಲ. ಅದೆಲ್ಲ ಬಿಟ್ಟು ಕರ್ಪೂರ ಅಂತೆಲ್ಲಾ ಹೇಳಿದ್ದು ಸರಿಯಲ್ಲ. ಆದ್ರೂ ರಕ್ಷಕ್ ನನ್ನ ಸ್ವೀಟ್ ಬ್ರದರ್ ಎಂದ್ರು ಪ್ರಥಮ್.