ಹುಬ್ಬಳ್ಳಿ : ಕಾಂಗ್ರೆಸ್ ನಲ್ಲಿ ಪಕ್ಷ ನಿಷ್ಟೆಯಿಲ್ಲ. ಹೀಗಾಗಿ ಕಾಂಗ್ರೆಸ್ ನವರೇ ಡಿಕೆಶಿ ವಿರುದ್ಧ ಪತ್ರ ಬರೆದಿದ್ದಾರೆ. ಡಿಕೆಶಿ ವಿರುದ್ಧ ಸೋನಿಯಾ ಗಾಂಧಿಗೆ ಪತ್ರ ಬರೆಯಲಾಗಿದೆ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡ ಶೆಟ್ಟರ್, ದೂರುಕೊಟ್ಟುವರು ಕಾಂಗ್ರೆಸ್ ನ ಮತ್ತೊಂದು ಗುಂಪು. ಅವರ ಪ್ರಚೋದನೆಯಿಂದಲೇ ಪತ್ರ ಬರೆದಿದ್ದಾರೆ. ಅಧಿಕಾರಕ್ಕಾಗಿ ನಡೆಯುತ್ತಿರುವ ಹೋರಾಟದ ಮತ್ತೊಂದು ತಂತ್ರ ಇದಾಗಿದೆ ಎಂದು ಸೋನಿಯಾ ಗಾಂಧಿಗೆ ಮಹಿಳಾ ಸಂಘಟನೆಗಳು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಕಳುಹಿಸಿದ್ದ ಮಿಂಚಂಚೆಯಲ್ಲಿ ಡಿಕೆಶಿ ಧರ್ಮಸ್ಥಳ ಪ್ರಕರಣದಲ್ಲಿ ಅನಗತ್ಯ ಹೇಳಿಕೆಗಳನ್ನು ನೀಡಿದ್ದರು. ಕಾಂಗ್ರೆಸ್ ನಾಯಕರ ಇಂತಹ ಹೇಳಿಕೆನ್ನು ನಿಲ್ಲಿಸಬೇಕೆಂದು ಉಲ್ಲೇಖಿಸಿದ್ದರು, ಮಹಿಳಾ ಸಂಘಟನೆಗಳು ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರವನ್ನು ಈ ರೀತಿ ವ್ಯಾಖ್ಯಾನಿಸಿದ್ದಾರೆ.
ಇನ್ನು, ಪೆಟ್ರೋಲ್ ನಲ್ಲಿ ಎಥನಾಲ್ ಮಿಶ್ರಣವಾಗುತ್ತಿರುವುದರ ಬಗ್ಗೆ ಮಾತನಾಡಿದ ಅವರು, ಎಥನಾಲ್ ಬಳಕೆಯ ಬಗ್ಗೆ ತಜ್ಞರು ಸಲಹೆ, ವರದಿ ಬಳಿಕ ತೀರ್ಮಾನವಾಗುತ್ತದೆ. ಕಾಂಗ್ರೆಸ್ ದೇಶವನ್ನು ಉದ್ದಾರ ಮಾಡಲಿಲ್ಲ. ಜನಪ್ರಿಯ ಯೋಜನೆಗೆ ಅಡ್ಡಗಾಲು ಹಾಕುತ್ತದೆ. ಎಥನಾಲ್ ಬಳಕೆ ದೇಶಕ್ಕೆ ಉತ್ತಮವಾಗಿದೆ. ರಾಜಕಾರಣಿಗಳ ಮಕ್ಕಳು, ವ್ಯಾಪಾರ ವಹಿವಾಟು ಮಾಡಬಾರದೆ ? ಈ ಆರೋಪದ ಹಿಂದೆ ವಿದೇಶಿಯರ ಕೈವಾಡ ಇದೆ. ನಿತಿನ್ ಗಡ್ಕರಿ ವಿರುದ್ಧ ವ್ಯವಸ್ಥಿತ ಷಡ್ಯಂತ್ರವಿದೆ ಎಂದು ಹೇಳಿದ್ದಾರೆ.