ಹಾವೇರಿ : ಬೇಡ್ತಿ – ವರದಾ ನದಿ ಜೋಡಣೆ ಹೊಸದಾದ ಯೋಜನೆಯಲ್ಲ. ಹಿಂದಿನ ಯೋಜನೆಗೂ ಪ್ರಸ್ತುತ ಯೋಜನೆಗೂ ವ್ಯತ್ಯಾಸವಿದೆ. ಸ್ವಾಮೀಜಿಗಳ ಹೋರಾಟಕ್ಕೆ ರಾಜ್ಯ ಸರಕಾರ ಮನವರಿಕೆ ಮಾಡಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವರದಿಗಾರರೊಂದಿಗೆ ಮಾತನಾಡುತ್ತಾ, ಯಾವುದೇ ರೀತಿಯಾಗಿ ಆ ಭಾಗದ ನೀರಿಗೆ ನಷ್ಟ ಆಗೋದಿಲ್ಲ. ಅಲ್ಲಿನ ಪರಿಸರಕ್ಕೂ ಯಾವುದೇ ರೀತಿಯಾಗಿ ಹಾನಿಯಾಗಲ್ಲ. ಸ್ವಾಮೀಜಿಗಳ ಹೋರಾಟಕ್ಕೆ ರಾಜ್ಯ ಸರಕಾರ ಮನವರಿಕೆ ಮಾಡಲಿ. ನಮ್ಮ ಭಾಗದ ಜನಪ್ರತಿನಿಧಿಗಳು ಮತ್ತು ಆಭಾದವರನ್ನೂ ಕರೆಯಲಿ. ಸೌಹಾರ್ದಯುತವಾದ ಒಂದು ನಿರ್ಣಯ ಮಾಡಲಿ ಎಂದಿದ್ದಾರೆ.
ಈ ಭಾಗದಲ್ಲಿ ಬರಗಾಲವಿದೆ,ಕುಡಿಯೋ ನೀರಿನ ಸಮಸ್ಯೆಯಿದೆ. ಈ ಯೋಜನೆಯಿಂದ ಕುಡಿಯುವ ನೀರು & ನೀರಾವರಿಗೆ ಅನುಕೂಲ. ಈ ವಿಚಾರ ಭಾವನಾತ್ಮಕವಾಗಿ ನೋಡಬಾರದು ಅಂತೇಳಿ ನನ್ನ ಮನವಿ. ರಾಜ್ಯ ಸರಕಾರ ಹೀಗಾಗಲೇ ಡಿಪಿಆರ್ ಮಾಡಲು ಒಪ್ಪಿಗೆ ನೀಡಿದೆ. ಡಿಪಿಆರ್ ನಂತರ ಎರಡೂ ಭಾಗದವರ ಜೊತೆ ಸಭೆ ಮಾಡಲಿ.ಪ್ರತ್ಯಕವಾಗಿ ಕರೆದು ಅಡ್ಡಿಯಿಲ್ಲ & ಒಟ್ಟಿಗೆ ಕರೆದರು ಅಡ್ಡಿಯಿಲ್ಲ. ಅತ್ಯಂತ ಸೂಕ್ತವಾಗಿರೋದಕ್ಕೆ ಕೇಂದ್ರ &ರಾಜ್ಯ ಸರಕಾರ ಒಪ್ಪಿದೆ. ವರದಾ-ಬೇಡ್ತಿ ವಿಚಾರದಲ್ಲಿ ಹಾವೇರಿಯಲ್ಲಿ ಶೀಘ್ರದಲ್ಲೇ ಸಭೆ ಮಾಡ್ತೆವೆ. ನಾವು ಕೂಡ ಜನಜಾಗೃತಿ ಮತ್ತು ಜನಾಭಿಪ್ರಾಯ ಸಂಗ್ರಹ ಮಾಡ್ತೇವೆ. ನಾವು ಸಮಾವೇಶ ಮೂಲಕ ಜನಾಭಿಪ್ರಾಯ ಸಂಗ್ರಹ ಮಾಡ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕೌಟುಂಬಿಕ ಕಲಹ | ಕಾರಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ BJP ಮುಖಂಡ



















