ಚಿಕ್ಕಮಗಳೂರು: ರಾಜ್ಯದಲ್ಲಿ ಹಾರ್ಟ್ ಅಟ್ಯಾಕ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ, ನಮ್ಮಲ್ಲಿ ಹೃದ್ರೋಗ ತಜ್ಞರಿಲ್ಲ ಎಂದು ಚಿಕ್ಕಮಗಳೂರು ಡಿಎಚ್ ಒ ಡಾ. ಅಶ್ವತ್ ಬಾಬು ಹೇಳಿದ್ದಾರೆ.
ಸದ್ಯಕ್ಕೆ ನಮ್ಮಲ್ಲಿ ಹೃದ್ರೋಗ ತಜ್ಞರಿಲ್ಲ. ಹೃದ್ರೋಗ ತಜ್ಞರ ಸ್ಥಾನ ಖಾಲಿ ಇವೆ. ಖಾಸಗಿ ಆಸ್ಪತ್ರೆಯಲ್ಲಿ ಓರ್ವ, ಸರ್ಕಾರಿ ಆಸ್ಪತ್ರೆಯಲ್ಲಿ ಒಬ್ಬರಿದ್ದರು. ಇದೀಗ ಅವರೂ ಇಲ್ಲ. ಚಿಕ್ಕಮಗಳೂರಿನಲ್ಲಿ ಹೃದ್ರೋಗ ತಜ್ಞರ ಕೊರತೆ ಇದೆ. ಕೌನ್ಸಿಲಿಂಗ್ ನಡೆಯುತ್ತಿದೆ. ಸರ್ಕಾರದಿಂದ ನೇಮಕವಾಗಬಹುದು ಎಂದಿದ್ದಾರೆ. ಈ ಸಂಗತಿ ಕೇಳಿ ಬಡವರು ಬೆಚ್ಚಿ ಬಿದ್ದಿದ್ದಾರೆ. ಉಳ್ಳವುರ ಹಣ ಕೊಟ್ಟು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಆದರೆ, ಬಡವರ ಗತಿ ಏನು? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ನಮ್ಮ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಿಗೆ ಹೃದಯ ಖಾಯಿಲೆಗೆ ಸಂಬಂಧಿಸಿದ ಔಷಧಿಗಳನ್ನು ಪೂರೈಕೆ ಮಾಡಲಾಗಿದೆ. ಎದೆ ನೋವು, ಎದೆಯುರಿಗೆ ಸಂಬಂಧಿಸಿದಂತೆ ಜೌಷಧಿಗಳನ್ನು ಸಮರ್ಪಕವಾಗಿ ಪೂರೈಸಲಾಗಿದೆ ಎಂದಿದ್ದಾರೆ.