ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO Recruitment 2025) ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ (VSSC)ದಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇಸ್ರೋದಲ್ಲಿ ಕೆಲಸ ಮಾಡಬೇಕು ಎಂಬ ಹಂಬಲ ಇರುವವರು vssc.gov.in ವೆಬ್ ಪೋರ್ಟಲ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಏಪ್ರಿಲ್ 9 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಹೀಗಿದೆ ಹುದ್ದೆಗಳ ವಿವರ
ಹುದ್ದೆ: ಪೋಸ್ಟ್ ಗ್ರ್ಯಾಜುಯೇಟ್ ಟೀಚರ್ (ಫಿಸಿಕ್ಸ್)
ವೇತನ: 47,600 – 1,51,100 ರೂ.
ವಿದ್ಯಾರ್ಹತೆ: ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಇಲ್ಲದಿದ್ದರೆ, ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ಫಿಸಿಕ್ಸ್, ಎಲೆಕ್ಟ್ರಾನಿಕ್ಸ್, ಅನ್ವಯಿಕ ಫಿಸಿಕ್ಸ್ ಅಥವಾ ನ್ಯೂಕ್ಲಿಯರ್ ಫಿಸಿಕ್ಸ್ ಸೇರಿ ಯಾವುದಾದರೂ ಒಂದು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಹಿಂದಿ ಹಾಗೂ ಇಂಗ್ಲಿಷ್ ನಲ್ಲಿ ಬೋಧಿಸುವ ಸಾಮರ್ಥ್ಯ ಇರಬೇಕು.
ಹುದ್ದೆ: ಪ್ರೈಮರಿ ಟೀಚರ್
ಸಂಬಳ: 35,400 – 1,12,400 ರೂ.
ವಿದ್ಯಾರ್ಹತೆ: ಎಲೆಮೆಮಟರಿ ಎಜುಕೇಷನ್ ನಲ್ಲಿ ಎರಡು ವರ್ಷದ ಡಿಪ್ಲೋಮಾ ಕೋರ್ಸ್ ಮುಗಿಸಿರಬೇಕು. ಶೇ. 50ರಷ್ಟು ಅಂಕಗಳೊಂದಿಗೆ ಡಿಪ್ಲೋಮಾ ಪಾಸ್ ಆಗಿರಬೇಕು. ಡಿಪ್ಲೋಮಾ ಇನ್ ಎಜುಕೇಷನ್ ಕೋರ್ಸ್ ಮುಗಿಸಿದವರು ಕೂಡ ಅರ್ಜಿ ಸಲ್ಲಿಸಬಹುದು.
ಹುದ್ದೆ: ಸಬ್ ಆಫೀಸರ್
ಸಂಬಳ: 35,400 – 1,12,400 ರೂ.
ವಿದ್ಯಾರ್ಹತೆ: ಆರು ವರ್ಷಗಳವರೆಗೆ ಫೈರ್ ಮ್ಯಾನ್ ಆಗಿರುವವರು ಅರ್ಜಿ ಸಲ್ಲಿಸಬಹುದು. ಪಿಸಿಎಂ ವಿಷಯಗಳೊಂದಿಗೆ ಬಿಎಸ್ಸಿ ಪಡೆದಿರಬೇಕು. ಎಚ್ ವಿಡಿ ಲೈಸೆನ್ಸ್ ಕೂಡ ಹೊಂದಿರಬೇಕು.