ಬೆಂಗಳೂರು: ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು 83 ಜ್ಯೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಫೆಬ್ರವರಿ 17ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮಾರ್ಚ್ 18ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಮಾಸಿಕ 40 ಸಾವಿರ ರೂ.ನಿಂದ 1.40 ಲಕ್ಷ ರೂ.ವರೆಗೆ ಸಂಬಳ ನೀಡಲಾಗುತ್ತದೆ. ಡಿಎ, ಎಚ್ ಆರ್ ಎ ಸೇರಿ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ.
ಯಾವ ಹುದ್ದೆಗಳು ಖಾಲಿ?
ಜೂನ್ಯಿಯರ್ ಎಕ್ಸಿಕ್ಯೂಟಿವ್ (ಫೈರ್ ಸರ್ವಿಸಸ್)- 13
ಜೂನ್ಯಿಯರ್ ಎಕ್ಸಿಕ್ಯೂಟಿವ್ (ಹ್ಯೂಮನ್ ರಿಸೋರ್ಸ್)- 66
ಜೂನ್ಯಿಯರ್ ಎಕ್ಸಿಕ್ಯೂಟಿವ್ (ಆಫಿಶಿಯಲ್ ಲಾಂಗ್ವೇಜ್)- 04
ವಿದ್ಯಾರ್ಹತೆ ಏನು?
ಜೂನ್ಯಿಯರ್ ಎಕ್ಸಿಕ್ಯೂಟಿವ್ (ಫೈರ್ ಸರ್ವಿಸಸ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಫೈರ್, ಮೆಕ್ಯಾನಿಕಲ್, ಆಟೋಮೊಬೈಲ್ ಎಂಜಿನಿಯರಿಂಗ್ ನಲ್ಲಿ ಬಿಇ ಅಥವಾ ಬಿ.ಟೆಕ್ ಪದವಿ ಪಡೆದಿರಬೇಕು. ಜೂನ್ಯಿಯರ್ ಎಕ್ಸಿಕ್ಯೂಟಿವ್ (ಹ್ಯೂಮನ್ ರಿಸೋರ್ಸ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಎಚ್ ಆರ್ ಎಂ, ಎಚ್ ಆರ್ ಡಿ, ಲೇಬರ್ ವೆಲ್ ಫೇರ್ ವಿಷಯದಲ್ಲಿ ಎಂಬಿಎ ಪಡೆದಿರಬೇಕು.
ಜೂನ್ಯಿಯರ್ ಎಕ್ಸಿಕ್ಯೂಟಿವ್ (ಆಫಿಶಿಯಲ್ ಲಾಂಗ್ವೇಜ್) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ಸ್ನಾತಕೋತ್ತರ ಪದವಿ ಪಡೆಯಬೇಕು. ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಎರಡು ವರ್ಷ ಭಾಷಾಂತರ ಮಾಡಿದ ಅನುಭವ ಇರಬೇಕು. ವಿಮಾನ ನಿಲ್ದಾಣಗಳ ಪ್ರಾಧಿಕಾರದ ಪೋರ್ಟಲ್ ಆಗಿರುವ https://aai.aero/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ 27 ವರ್ಷಗಳ ಮಿತಿ ಇದೆ. ಅರ್ಜಿ ಶುಲ್ಕ 1 ಸಾವಿರ ರೂ. ನಿಗದಿ ಮಾಡಲಾಗಿದೆ.