ಬೆಂಗಳೂರು: ಮೈಸೂರು ಪ್ರಾಂತ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಮೊದಲು ಮೀಸಲಾತಿ ಕೊಟ್ಟಿದ್ದರು. ಅದನ್ನು ಐದನೇ ಶೆಡ್ಯೂಲ್ ನಲ್ಲೇ ಇಟ್ಟಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ 101 ಜಾತಿ ಆಗಿದೆ. ಕಾಂಗ್ರೆಸ್ ಜಾತಿಗಳನ್ನು ಹೆಚ್ಚು ಮಾಡುತ್ತಾ ಬಂದಿದೆ. ಆದರೆ ಮೀಸಲಾತಿ ಮಾತ್ರ ಹೆಚ್ಚು ಮಾಡಲಿಲ್ಲ ಎಂದು ಮಾಜಿ ಶಾಸಕ ಕುಡುಚಿ ರಾಜೀವ್ ಹೇಳಿದ್ದಾರೆ.
ಮೀಸಲಾತಿಯಲ್ಲಿರು ಗೊಂದಲವನ್ನು ಸರಿಪಡಿಸುವಂತೆ ಸರ್ಕಾಕ್ಕೆ ಆಗ್ರಹಿ ಮಾತನಾಡಿದ ಕುಡುಚಿ ರಾಜೀವ್, ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಮೀಸಲಾತಿಯನ್ನು15ರಿಂದ 17 ಕ್ಕೆ ಏರಿಕೆ ಮಾಡಿದರು ಹಾಗೂ ಎಸ್ಟಿ ಮೀಸಲಾತಿಯನ್ನು3 ರಿಂದ 7 ಕ್ಕೆ ಏರಿಕೆ ಮಾಡಿದ್ದರು. ಆಗ ಸಿದ್ದರಾಮಯ್ಯ ಇದನ್ನು ವೋಟ್ ಬ್ಯಾಂಕ್ ಪಾಲಿಟಿಕ್ಸ್ ಎಂದಿದ್ದರು.
ಈಗ ಸಿದ್ದರಾಮಯ್ಯ ಅವರು ಅದೇ 17% ಮಾಡಿದ್ದಾರೆ. ಇದನ್ನು ಬೊಮ್ಮಾಯಿ ಮಾಡಿದ್ದು ಎಂದು ಹೇಳಬೇಕಲ್ಲವೇ? ಜನರಿಗೆ ಆಗ ತಪ್ಪು ಸಂದೇಶವನ್ನು ಹರಡಿದ್ದರು ಎಂದು ಕಿಡಿಕಾರಿದ್ದಾರೆ.
ಸಿಎಂ ಸಾಮಾಜಿಕ ನ್ಯಾಯದ ಹರಿಕಾರ ಎನ್ನುತ್ತಾರೆ. ಆದರೆ ಪರಿಶಿಷ್ಠ ಜಾತಿಗಳಿಗೆ ನ್ಯಾಯ ಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಒಳಮೀಸಲಾತಿಯಲ್ಲಿ ಅಸಮಾಧಾನ ಎದ್ದಿದ್ದು, ನ್ಯಾ.ನಾಗಮೋಹನ್ ದಾಸ್ ಕಮಿಟಿ ಆದಿ ಆಂಧ್ರ, ಆದಿಕರ್ನಾಟಕ, ಆದಿ ದ್ರಾವಿಡಕ್ಕೆ ವಿಶೇಷತೆ ಕೊಟ್ಟು.ಸರ್ಕಾರ ಎರಡೂ ಕಡೆ ಕ್ಯಾಸ್ಟ್ ಸರ್ಟಿಪಿಕೆಟ್ ಸಿಗದಂತೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಮಾಧುಸ್ವಾಮಿ ಸಮಿತಿ ವರದಿಯು ಲಂಬಾಣಿ, ಬಂಜಾರ, ಬೋವಿಗೆ 4.5 ಮೀಸಲಾತಿ, ಅಲೆಮಾರಿಗಳಿಗೆ 1% ಮೀಸಲಾತಿ ನೀಡಿತ್ತು. ಆದರೆ ಸಿದ್ದರಾಮಯ್ಯ ಇದನ್ನು ಒಟ್ಟಿಗೆ ಸೇರಿಸಿದ್ದಾರೆ. 5.5% ಮೀಸಲಾತಿ ಈ ಎರಡು ಸಮುದಾಯಕ್ಕೆ ಸಿಗಬೇಕಿತ್ತು, ಆದರೆ ಈ ಸರ್ಕಾರ 5%ಗೆ ಸೀಮಿತಗೊಳಿಸಿದೆ ಇದರ ವಿರುದ್ಧ ಅನಿರ್ಧಿಷ್ಟಾವಧಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಅಲೆಮಾರಿಗಳಿಗೆ ಪ್ರತ್ಯೇಕ 1%, ಬಂಜಾರ, ಲಂಬಾಣಿಗೆ 5.5 %, ಎಡಬಲಕ್ಕೆ 5.5% ಮೀಸಲಾತಿ ಕೊಡಿ. ಆದಿ ದ್ರಾವಿಡ, ಆದಿ ಆಂದ್ರ ಗೊಂದಲ ಸರಿಪಡಿಸಿ. ಅಧಿಕಾರಿಗಳಿಂದ ಮುಂದೆ ತೊಂದರೆ ಆಗಲಿದೆ. ನೀವು ಯಾವ ಆಯೋಗದ ಶಿಫಾರಸು ಪಾಲಿಸಿದ್ದೀರಾ? ಮಾಧುಸ್ವಾಮಿ ಆಯೋಗದ ಶಿಫಾರಸು ಒಪ್ಪಿದ್ದೀರಾ? ನಾಗಮೋಹನ್ ದಾಸ್ ವರದಿ ಒಪ್ಪಿದ್ದೀರ? ಸುಪ್ರೀಂ ಆದೇಶವನ್ನ ಪಾಲನೆ ಮಾಡಿದ್ದೀರಾ? ಇದರ ಬಗ್ಗೆ ನೀವು ಸ್ಪಷ್ಟ ಪಡಿಸಿ
ರಾಜಕೀಯ ತೀರ್ಮಾನಿಂದ ನ್ಯಾಯ ಸಿಗುವುದಿಲ್ಲ, ನೀವು ತಗೆದುಕೊಂಡಿರುವ ತೀರ್ಮಾನ ಅವೈಜ್ಙಾನಿಕವಾಗಿರುವುದರಿಂದ ರಾಜ್ಯಾದ್ಯಂತ ಹೋರಾಟಗಳು ನಡೆದಿವೆ. ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲು ಕೊಡಬೇಕು. ಬಂಜಾರ, ಬೋವಿ, ಕೊರಮ, ಕೊರಚಕ್ಕೆ 4.5%, ಆದಿ ದ್ರಾವಿಡ, ಆಂದ್ರ,ಕರ್ನಾಟಕಕ್ಕೆ ಇರುವ ಗೊಂದಲ ಸರಿಪಡಿಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಅಲೆಮಾರಿ ಸಮುದಾಯ ಹೋರಾಟ ಮಾಡ್ತಾನೆ ಇದೆ ಸಮಾಜದಲ್ಲಿ ಕಟ್ಟಕಡೆಯ ಸಮುದಾಯ ಎಂದರೆ ಅಲೆಮಾರಿ ಸಮುದಾಯ. ಇವರು ಬಿಕ್ಷೆ ಬೇಡಿ ಬದುಕುವವರು, ಹರಿದ ಸೀರೆಯೇ ಅವರ ಆಸರೆಯಾಗಿದೆ, ನಾಲ್ಕು ಗೂಟಕ್ಕೆ ಸೀರೆ ಕಟ್ಟಿ ಬದುಕುವ ಸಮುದಾಯವಾಗಿದೆ. ಆ ಸಮುದಾಯದ ಬಗ್ಗೆ ಸರ್ಕಾರ ಧ್ವನಿ ಎತ್ತಬೇಕಿತ್ತು. ಸರ್ಕಾರಕ್ಕೆ ಸಚಿವರಿಗೆ ಮನವಿ ಕೊಡಲು ಅವರು ಹೋದಾಗ, ರಾಜಕೀಯ ನಿರ್ಧಾರ ತೆಗೆದು ಕೊಂಡಿದ್ದೇವೆ ಎಂದರಂತೆ. ಸಾಮಾಜಿಕ ನ್ಯಾಯ ಸಂಪೂರ್ಣವಾಗಿ ತೊಳೆದಿದೆ. ನಾವು ಅಲೆಮಾರಿಗಳ ಪರವಾಗಿ ಧ್ವನಿ ಎತ್ತುತ್ತೇವೆ ಹಾಗೂ ಅನಿರ್ಧಿಷ್ಟಾವದಿಗೆ ಹೋರಾಟ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.