ಬೆಂಗಳೂರು: ಮೊದಲು ನನ್ನನ್ನು ಬಾಸ್ ಅನ್ನುತ್ತಿದ್ದರು. ಈಗ ನನ್ನ ಮಗನನ್ನು ಬಾಸ್ ಅಂತಾ ಕರೆಯುತ್ತಿದ್ದಾರೆಂದು ನಟ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಹೇಳಿದ್ದಾರೆ.
ಆಗಸ್ಟ್ 1ರಂದು ‘ಕೊತ್ತಲವಾಡಿ’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣ ಮಾಡಿದ್ದು, ಚಿತ್ರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ನಟನೆ ಮಾಡುವುದು ತುಂಬಾ ಕಷ್ಟ. ಅದು ಎಷ್ಟು ಕಷ್ಟ ಎಂಬುವುದನ್ನು ನನ್ನ ಮಗನಿಂದ ನಾನು ತಿಳಿದುಕೊಂಡೆ. ಯಶ್ ಸಾಕಷ್ಟು ಹೆಸರು ಮಾಡಿದ್ದಾನೆ. ಹೂವಿನ ಜೊತೆ ನಾರು ಹೋದಂತೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.