ತುಮಕೂರು: ಕೆಲಸಕ್ಕೆ ಸಂಬಳ ಫಿಕ್ಸ್ ಮಾಡಿರುವುದನ್ನು ನಾವು ಕೇಳಿದ್ದೇವೆ. ಆದರೆ, ಇಲ್ಲಿ ಕಳ್ಳತನಕ್ಕೂ ಸಂಬಳ ಫಿಕ್ಸ್ ಮಾಡಲಾಗಿದೆ.

ತುಮಕೂರು ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಗೃಹ ಸಚಿವರ ತವರು ಕ್ಷೇತ್ರದಲ್ಲಿಯೇ ಈ ಘಟನೆ ನಡೆದಿದ್ದು, ಪೊಲೀಸ್ ಇಲಾಖೆ ಅಚ್ಚರಿ ವ್ಯಕ್ತಪಡಿಸಿದೆ. ಬೆಂಗಳೂರು ಮೂಲದ ರಾಘವೇಂದ್ರ ಎಂಬ ವ್ಯಕ್ತಿ ವೆಂಕಟೇಶ್ ಎಂಬಾತನನ್ನ ಕಳ್ಳತನಕ್ಕಾಗಿ ಕೆಲಸಕ್ಕೆ ಇಟ್ಟುಕೊಂಡಿದ್ದ. ಆತನಿಗೆ 20 ಸಾವಿರ ರೂ. ಸಂಬಳ ಕೂಡ ಫಿಕ್ಸ್ ಮಾಡಿದ್ದ.
ಈ ಸಂಬಳ ಪಡೆಯುತ್ತಿದ್ದ ವೆಂಕಟೇಶ್ ಕೊರಟಗೆರೆ ಸುತ್ತಮುತ್ತ ರಾತ್ರಿ ಹೊತ್ತು ಕೊಳವೆ ಬಾವಿಯಲ್ಲಿದ್ದ ವೈರ್ ಗಳನ್ನ ಕದ್ದು ರಾಘವೇಂದ್ರನಿಗೆ ನೀಡುತ್ತಿದ್ದ. ಕದ್ದ ಕೇಬಲ್ ವೈರ್ ಗಳನ್ನ ರಾಘವೇಂದ್ರ, ವಿನೇಶ್ ಪಟೇಲ್ ಎಂಬಾತನಿಗೆ ಮಾರಾಟ ಮಾಡುತ್ತಿದ್ದ. ಈ ಘಟನೆಯನ್ನು ಸದ್ಯ ಪೊಲೀಸರು ಬೇಧಿಸಿದ್ದಾರೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.