ನವದೆಹಲಿ: ವಿಚ್ಛೇದನದ (Divorce) ನೀಡಿದ್ದ ಪತ್ನಿಗೆ ಜೀವನಾಂಶ (Alimony) ಕೊಡುವುದಕ್ಕಾಗಿ ದರೋಡೆ ಮಾಡಿ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.
ಆರೋಪಿ ಹಾಗೂ ಆತನ ಸಹಚರರನ್ನು ದೆಹಲಿ (Delhi) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾ. 31 ರಂದು ದೆಹಲಿಯ ಪಿತಾಂಪುರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ, ಕೊರಿಯರ್ ಇದೆ ಎಂದು ಹೇಳಿ ವೃದ್ಧೆಯೊಬ್ಬರ ಮನೆಗೆ ಹೋಗಿ ಬಂದೂಕು ತೋರಿಸಿ, ದರೋಡೆಗೆ ಯತ್ನಿಸಿದ್ದಾನೆ. ಈ ವೇಳೆ ವೃದ್ಧೆಯ ಮಗಳು ಮನೆಯ ಬಾಗಿಲನ್ನು ಲಾಕ್ ಮಾಡಿದ್ದಳು. ಆನಂತರ ಆರೋಪಿಗಳು ಪರಾರಿಯಾಗಿದ್ದರು.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ದೃಶ್ಯಾವಳಿ, ಗುಪ್ತಚರ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪಂಕಜ್ (25) ಮತ್ತು ನಿವಾಸಿ ರಾಮ ಸ್ವಾಮಿ (28) ಹಾಗೂ ಹರ್ಷ ಎಂದು ಗುರುತಿಸಲಾಗಿದೆ. ಪಂಕಜ್ ತನ್ನ ವಿಚ್ಛೇದನದ ನಂತರ ಜೀವನಾಂಶ ನೀಡಲು ದರೋಡೆಗೆ ಯತ್ನಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.