ಶಿವಮೊಗ್ಗ: ಎಳ್ಳಮಾವಾಸೆ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಜಾತ್ರಾ ಮಹೋತ್ಸವ ಹಿನ್ನೆಲೆ, ಸಾವಿರಾರು ಭಕ್ತರು ತುಂಗಾ ನದಿಯ ರಾಮ ಕೊಂಡದಲ್ಲಿ ತೀರ್ಥಸ್ನಾನ ಮಾಡಿ ದೇವರ ದರ್ಶನ ಪಡೆದಿದ್ದಾರೆ.

ಇಂದಿನಿಂದ ಮೂರು ದಿನಗಳ ಪರ್ಯಂತ ನಡೆಯುವ ಈ ರಾಮೇಶ್ವರ ಎಳ್ಳ್ ಅಮವಾಸ್ಯೆ ಜಾತ್ರೆಯು ಅತ್ಯಂತ ವೈಭವದಿಂದ ಜರುಗಲಿದ್ದು, ಕೊನೆಯ ದಿನದಂದು ನಡೆಯುವ ತುಂಗಾನದಿಯ ತೆಪೋತ್ಸವ ಜಾತ್ರೆಯ ಪ್ರಮುಖ ಆಕರ್ಷಣೆವಾಗಿದೆ. ಈ ಕಾರ್ಯಕ್ರಮವನ್ನು ನೋಡಲು ಸಾವಿರಾರು ಭಕ್ತರು ನಾನಾಕಡೆಗಳಿಂದ ಬರುತ್ತಾರೆ.

ಇಂದಿನ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ರಾಮ ಕೊಂಡದಲ್ಲಿ ಸ್ನಾನ ಮಾಡಿ ಪುಲಕೀತರಾಗಿದ್ದಾರೆ ಹಾಗೂ ತೀರ್ಥಸ್ನಾನದಲ್ಲಿ ತಹಸೀಲ್ದಾರ್, ದೇವಸ್ಥಾನ ಸಮಿತಿ ಸೇರಿ ಪಟ್ಟಣ ಪಂಚಾಯತಿ ಸದಸ್ಯರು ಭಾಗಿಯಾಗಿದ್ದರು.
ಇದನ್ನೂ ಓದಿ; ಮುಟ್ಟೆಂದರೆ ಗುಟ್ಟಲ್ಲ ಎಂದ ಅಣ್ಣಯ್ಯ ಅರಿವಿನ ಸಂದೇಶ..!



















