ಯುವಕನೊಬ್ಬ 6 ತಿಂಗಳುಗಳ ಕಾಲ ತೀವ್ರವಾಗಿ ಗಾಯಗೊಂಡು ಕೋಮಾಗೆ ಜಾರಿ, ಮರಳಿ ಎಚ್ಚರವಾಗಿ ಆಸ್ಪತ್ರೆಯ ಬಿಲ್ ಕಂಡು ಶಾಕ್ ಗೆ ಒಳಗಾಗಿರುವ ಘಟನೆ ನಡೆದಿದೆ.
ನ್ಯೂಯಾರ್ಕ್ ನ ಲಾಸ್ ವೇಗಾಸ್ ನಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಜಾನ್ ಪೆನ್ನಿಂಗ್ ಟನ್ ಎಂಬ ಹೆಸರಿನ ವ್ಯಕ್ತಿ ತಮ್ಮ 30ನೇ ವಯಸ್ಸಿನಲ್ಲಿ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕೋಮಾಗೆ ಜಾರಿದ್ದರು. ಹೀಗಾಗಿ ಅವರು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, 6 ತಿಂಗಳ ನಂತರ ಏಕಾಏಕಿ ಎಚ್ಚರವಾಗಿದ್ದಾರೆ.
ಆದರೆ, ಅವರು ಎಚ್ಚರವಾಗುತ್ತಿದ್ದಂತೆ ಆಸ್ಪತ್ರೆಯ ಬಿಲ್ ನೋಡಿ ಶಾಕ್ ಆಗಿದ್ದಾರೆ. 6 ತಿಂಗಳು ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದದ್ದಕ್ಕೆ 2.5 ಮಿಲಿಯನ್ ಡಾಲರ್ (ರೂ. 2,09,67,775) ಬಿಲ್ ಕಂಡು ಶಾಕ್ ಗೆ ಒಳಗಾಗಿದ್ದಾರೆ. ಈ ವಿಚಾರವನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆ.
ನಾನು ಕಣ್ಣು ಬಿಟ್ಟಾಗ ನನ್ನನ್ನು ಹಾಸಿಗೆಗೆ ಕಟ್ಟಿ ಹಾಕಿದ್ದರು. ಬೆಳಿಗ್ಗೆ ನಿದ್ರೆಯಿಂದ ಎದ್ದು ಆಫೀಸಿಗೆ ಹೊರಡಲು ತಡವಾಯಿತು ಎಂಬ ಅನುಭವ ನನ್ನಲ್ಲಿತ್ತು. ಆ. 6 ತಿಂಗಳ ಕಾಲ ನಾನು ಪ್ರಜ್ಞೆ ಕಳೆದುಕೊಂಡಿದ್ದದೆ ಎಂಬುವುದೇ ನನಗೆ ಗೊತ್ತಿರಲಿಲ್ಲ. ನನ್ನ ಪಕ್ಕದಲ್ಲಿದ್ದ ನರ್ಸ್ ಬಳಿ ನಾನು ಬಾತ್ ರೂಂ ಬಳಸಬಹುದಾ? ಎಂದು ಕೇಳಿದೆ. ಆದರೆ, ಅವರು ಅಳುತ್ತಾ ಓಡಿ ಹೋದರು. ಆನಂತರ ನರ್ಸ್ ಮರಳಿ ಬಂದರು. ಆಗ ಅವರು ಕೋಮಾದ ವಿಷಯವನ್ನು ತಿಳಿಸಿದರು. ಅಲ್ಲದೇ, ತಮ್ಮ ಚಿಕಿತ್ಸೆಯ ವೆಚ್ಚವನ್ನು ಸರಿದೂಗಿಸಲು ಸಹಾಯ ಮಾಡಲು GoFundMe ಪುಟ ರಚಿಸಿದ್ದಾಗಿ ಕೂಡ ಹೇಳಿದರು. ನಂತರ ವಕೀಲರ ಸಹಾಯದಿಂದ ಎಲ್ಲ ವೆಚ್ಚ ಭರಿಸಿದಾಗ ನಿಟ್ಟುಸಿರು ಬಿಟ್ಟೆ ಎಂದು ಹೇಳಿದ್ದಾರೆ.