ಮಂಡ್ಯ: ಯುವಕನೊಬ್ಬ ಪ್ರೀತಿಸುತ್ತಿದ್ದ ಅಪ್ರಾಪ್ತೆ ಮನೆ ಮುಂದೆ ಜಿಲೆಟಿನ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ರಾಮಚಂದ್ರ (21) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಕಲ್ಲು ಗಣಿಗಾರಿಕೆಗೆ ಬಳಸುವ ಜಿಲೆಟಿನ್ ಸ್ಫೋಟಿಸಿಕೊಂಡು ರಾಮಚಂದ್ರು ಆತ್ಮಹತ್ಯೆಗೆ ಶರಣಾಗಿದ್ದಾನೆ. ಜಿಲೆಟಿನ್ ಸ್ಫೋಟಕ್ಕೆ ಯುವಕನ ಹೊಟ್ಟೆಯ ಭಾಗ ಛಿದ್ರವಾಗಿದೆ.
ರಾಮಚಂದ್ರ ಇತ್ತೀಚೆಗಷ್ಟೇ ಪ್ರೀತಿಸುತ್ತಿದ್ದ ಅಪ್ರಾಪ್ತೆಯೊಂದಿಗೆ ಓಡಿ ಹೋಗಿದ್ದ. ಹೀಗಾಗಿ ಆತನ ವಿರುದ್ಧ ಫೋಕ್ಸೋ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ 6 ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ. ಆನಂತರ 2 ಕುಟುಂಬಗಳ ರಾಜಿ ಸಂಧಾನದ ನಂತರ ಕೇಸ್ ಹಿಂಪಡೆಯಲಾಗಿತ್ತು.
ಆದರೆ, ಈತ ಜೈಲಿನಿಂದ ಹೊರ ಬಂದ ನಂತರ ಅಪ್ರಾಪ್ತೆ ಮಾತ್ರ ಈತನ ಸಂಪರ್ಕಕಕ್ಕೆ ಬಂದಿರಲಿಲ್ಲ. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಕಲ್ಲುಗಣಿಗಾರಿಕೆಗೆ ಬಳಸುವ ಜಿಲೆಟಿನ್ ಸ್ಪೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.