ಬೆಂಗಳೂರು : ಕೆಪಿಎಸ್‌ಸಿ ಮೋಸ ಅಂತ ಪ್ರಪಂಚಕ್ಕೆಗೊತ್ತಿದೆ. ನೂರಾರು ಎಕ್ಸಾಂಪಲ್ಸ್ ನಾನು ಕೊಟ್ಟಿದ್ದೇನೆ. ಕೃಷ್ಣರ ಹೇಳಿಕೆಯಲ್ಲಿಸರಿಯೂ ಇದೆ, ತಪ್ಪೂ ಇದೆ.ನಮ್ಮಲ್ಲಿ ಒಂದು ಗಾದೆ ಇದೆ. ಹುಚ್ಚನಿಗೆ ಹೆಣ್ಣು ಕೊಡಿ ಅಂತ ಹೋದ್ರಂತೆ. ಅವರು ಹುಚ್ಚು ಬಿಡಿಸಿ ಕರೆತನ್ನಿ ಅಂದ್ರಂತೆ. ಅವನನ್ನ ವೈದ್ಯರ ಬಳಿಕರೆದೋಯ್ದ್ರುಆಗ ವೈದ್ಯರು ಮದುವೆ ಮಾಡಿ ಹುಚ್ಚು ಬಿಡುತ್ತೆ ಅಂದ್ರು ಅಲ್ಲಿಗೆ ರಿಸಲ್ಟ್ ಏನಾಯ್ತು ಎಂದು ಆರ್ ಅಶೋಕ್ ಲೇವಡಿ ಮಾಡಿದ್ದಾರೆ.
ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡುತ್ತಾ,ಇದರ ಬಗ್ಗೆ ಎಸ್ ಐಟಿ ಮಾಡಿ. ಸಿಎಂ ಮೇಲೆ ಮೂಡಾ ತನಿಖೆ ಆಯ್ತು. ಸಚಿವರು, ಶಾಸಕರ ಮೇಲೆ ತನಿಖೆ ಆಯ್ತು. ನಾವು ಹೋಗಿ ಕಟಕಟೆ ಮುಂದೆ ನಿಂತೆವು. ಪೊಲೀಸ್ ಠಾಣೆಗೆ ಹೋಗಿನಾವು ನಿಲ್ಲಲಿಲ್ವೇ? ಲೋಕಾಯುಕ್ತಕ್ಕೆ ಹೋಗಿ ವಿವರಣೆ ಕೊಡಲಿಲ್ವೇ? ಇವರು ಹೋಗಿ ನಿಲ್ಲಲಿ. ತಪ್ಪು ಮಾಡಿದ್ದರೆ ಅವರಿಗೆ ಪನಿಷ್ಮೆಂಟ್ ಕೊಡಿ ಎಂದು ಕಿಡಿ ಕಾರಿದ್ದಾರೆ.
ಸದನ ಸಮಿತಿ ಮಾಡೋದಾದ್ರೆ ಮಾಡಿ. ನಾನು ಅದಕ್ಕೆ ಸ್ವಾಗತ ಮಾಡ್ತೇನೆ. ಯಾವ ತನಿಖೆ ಮಾಡ್ತಿರೋ ನಿಮಗೆ ಸೇರಿದ್ದು, ಆದರೆ ಅವರಿಗೆ ಕಾನೂನಿನ ಭಯ ತೋರಿಸಿ. ಕೆಪಿಎಸ್ ಸಿಗಿಂತ ಸುಪ್ರೀಂ ಸರ್ಕಾರ ಅಂತ ತೋರಿಸಿ. ಯಾರು ತಪ್ಪಿತಸ್ಥರಿದ್ದಾರೆ ಅವರ ಮೇಲೆ ಕ್ರಮ ಮಾಡಿ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಮದುವೆ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಖತರ್ನಾಕ್ ಕಳ್ಳನ ಬಂಧನ!



















