ಬೆಂಗಳೂರು: ಮನೆ ಟೆರೇಸ್ ಮೇಲಿದ್ದ ಸೋಲಾರ್ ಗೂ ಖದೀಮರು ಕನ್ನ ಹಾಕಿರುವ ಘಟನೆ ನಡೆದಿದೆ.
ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬಸವೇಶ್ವರ ನಗರದ ಮನೆಯೊಂದರ ಮೇಲೆ ಈ ಘಟನೆ ನಡೆದಿದೆ.
ಸೈಲೆಂಟ್ ಆಗಿ ಟೆರೇಸ್ ಮೇಲೆ ಬಂದಿದ್ದ ಖದೀಮ, ಸೋಲಾರ್ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಸೋಲಾರ್ ಹೀಟರ್ ಮೇಲೆ ಅಳವಡಿಸಿದ್ದ ಸ್ಟೀಲ್ ಹಾಗೂ ತಾಮ್ರವನ್ನು ಕೂಡ ಖದೀಮ ದೋಚಿದ್ದಾನೆ. ಆರೋಪಿಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಇದು ಎರಡನೇ ಪ್ರಕರಣ ಎಂದು ದೂರುದಾರರು ಆರೋಪಿಸಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಟ್ಯಾಗ್ ಮಾಡಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.