ಸಿಲ್ಚಾರ್: ಕುಡಿದು ಬಂದು ಚಿತ್ರಹಿಂಸೆ ನೀಡುತ್ತಿದ್ದ ಪತಿಯನ್ನು ಪತ್ನಿಯೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಅಸ್ಸಾಂನ (Assam Crime News) ಜೋರ್ಹತ್ ಜಿಲ್ಲೆಯಲ್ಲಿ ನಡೆದಿದ್ದು, 26 ವರ್ಷದ ಮಹಿಳೆಯೊಬ್ಬಳು ತನ್ನ ಪತಿಯನ್ನು ಮಚ್ಚಿನಿಂದ ಇರಿದು ಕೊಲೆ ಮಾಡಿ (Murder), ನಂತರ ಪೊಲೀಸರ ಎದುರು ಶರಣಾಗಿದ್ದಾಳೆ.
ಜೋರ್ಹತ್ ನ ಮರಿಯಾನಿ ಪಟ್ಟಣದ ಸಮೀಪದ ಹಿಲಿಖಾ ಟೀ ಎಸ್ಟೇಟ್ ನಲ್ಲಿ ಈ ಘಟನೆ ನಡೆದಿದೆ. ಗಂಡನನ್ನು ಕೊಲೆ ಮಾಡಿದ ನಂತರ ಆ ಮಹಿಳೆ ಮರಿಯಾನಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಳೆ.ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಹಾಗೂ ಅವರ ಕುಟುಂಬದ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಲಖಿಮೋನಿ ರವಿದಾಸ್ ಎಂದು ಗುರುತಿಸಲಾದ ಮಹಿಳೆ ತಾನೇ ತನ್ನ ಪತಿಯನ್ನು ಕೊಂದಿದ್ದೇನೆ ಎಂದು ಹೇಳಿದ್ದಾಳೆ. ನನ್ನ ಗಂಡ ಪ್ರತಿ ದಿನ ಕುಡಿದು ಬಂದು ಪೀಡಿಸುತ್ತಿದ್ದ. ನನಗೆ ಆತನ ಹಿಂಸೆಯನ್ನು ಸಹಿಸಲಾಗಲಿಲ್ಲ. ಹೀಗಾಗಿ, ಈ ಕೊಲೆ ಮಾಡಿದೆ ಎಂದು ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.