ಮದುವೆ ವಿಚಾರವನ್ನು ರಿವೀಲ್ ಮಾಡಿದ ಕೆಲವೇ ಹೊತ್ತಲ್ಲಿ ಖ್ಯಾತ ನಟನ ಪತ್ರಿಯೊಬ್ಬರು ತಾಯಿ ಆಗುತ್ತಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ.
ಫ್ಯಾಷನ್ ಡಿಸೈನರ್ ಆಗಿರುವ ಜಾಯ್ ಕ್ರಿಜಿಲ್ಡಾ ಅವರೊಂದಿಗೆ ನಟ ಮತ್ತು ಚೆಫ್ ಆಗಿರುವ ಮಾದಂಪಟ್ಟಿ ರಂಗರಾಜ್ ಮದುವೆ ಆಗಿದ್ದರು.
ಮದುವೆಯಾಗಿ ಕೆಲವೇ ಹೊತ್ತಲ್ಲಿ ಪ್ರೆಗ್ನೆನ್ಸಿ ಘೋಷಣೆ !
“ಬೇಬಿ ಲೋಡಿಂಗ್ 2025. ನಾನೀಗ 6 ತಿಂಗಳ ಗರ್ಭಿಣಿ ಎಂದು ಜಾಯ್ ಕ್ರಿಜಿಲ್ಡಾ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ನಲ್ಲಿ ಅವರು ಬರೆದುಕೊಂಡಿದ್ದಾರೆ.
ಸದ್ಯ, ಈಗ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾದಂಪಟ್ಟಿ ರಂಗರಾಜ್ ಅವರ ಮೊದಲ ಪತ್ನಿ ಶ್ರುತಿ ರಂಗರಾಜ್ ವಕೀಲೆ ಆಗಿದ್ದಾರೆ. ವಕೀಲೆ ಕೆಲವು ವಾರಗಳ ಹಿಂದಿನವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿದ್ದರು, ತಮ್ಮ ಪುತ್ರರೊಂದಿಗೆ ಚಿತ್ರಗಳನ್ನು ಸಹ ಪೋಸ್ಟ್ ಮಾಡಿದ್ದರು.
ಈಗಲೂ ಶ್ರುತಿ ಮಾದಂಪಟ್ಗಟಿ ರಂಗರಾಜ್ ಪತಿ ಎಂದೇ ಸೋಶೀಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ಧಾರೆ. ಇಬ್ಬರು ವಿಚ್ಚೇದನ ಪಡೆದಿರುವ ಬಗ್ಗೆ ಎಲ್ಲೂ ಮಾಹಿತಿ ಇಲ್ಲ. ರಂಗರಾಜ್ ಅವರ ಮೊದಲ ಪತ್ನಿ ಇದುವರೆಗೂ ಈ ಬಗ್ಗೆ ಯಾವುದೇ ರಿಯಾಕ್ಷನ್ ನೀಡಿಲ್ಲ.