ಚಿಕ್ಕಮಗಳೂರು: ಬಿಜೆಪಿಯವರು ಮಹಾತ್ಮ ಗಾಂಧೀಜಿಯವರ ಬಗ್ಗೆ ಎಂತಹ ಗೌರವ, ಭಾವನೆಯನ್ನು ಇಟ್ಟುಕೊಂಡಿದ್ದಾರೆ ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ. ಇದೀಗ ಹೊಸದಾಗಿ ಗಾಂಧೀಜಿ ಅವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಗೃಹ ಸಚಿವ ಡಾ ಜಿ. ಪರಮೇಶ್ವರ್ ಹೇಳಿದ್ದಾರೆ.
ಬಿಜೆಪಿಯಿಂದ ಕಾಂಗ್ರೆಸ್ ವಿರುದ್ಧ ಜಾಹಿರಾತು ವಿಚಾರವಾಗಿ ಚಿಕ್ಕಮಗಳೂರು ನಗರದಲ್ಲಿ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಮಹಾತ್ಮ ಗಾಂಧೀಜಿಯವರ ಬಗ್ಗೆ ಅಷ್ಟೊಂದು ಗೌರವವಿದ್ದರೆ ಉದ್ಯೋಗ ಖಾತ್ರಿಗೆ ಇಟ್ಟಿದ್ದ ಹೆಸರನ್ನ ಯಾಕೆ ತೆಗೆದರು? ಇದಕ್ಕೆ ಏನಾದರೂ ಕಾರಣ ಇದೆಯಾ? ಅಥವಾ ಹೆಸರನ್ನು ತೆಗೆಯಬೇಕು ಎಂದು ಯಾರಾದರೂ ಹೋರಾಟ ಮಾಡಿದ್ರಾ ಎಂದು ಪ್ರಶೆ ಮಾಡಿದ್ದಾರೆ.
ಗಾಂಧಿಯವರ ಹೆಸರನ್ನ ಕಾಂಗ್ರೆಸ್‌ನವರು ಮನೆ ಮನೆಗೆ ತೆಗೆದುಕೊಂಡು ಹೋಗಿದ್ದರು. ಕಾಂಗ್ರೆಸ್ ಹೆಸರು ಮಹಾತ್ಮ ಗಾಂಧೀಜಿಯೊಂದಿಗೆ ಜೋಡಣೆಯಾಗಿದೆ ಎಂದು ಈ ರೀತಿ ಮಾಡಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ವರ್ಡ್ ಬ್ಯಾಂಕ್ ನವರು ಹೇಳುತ್ತಾರೆ, ವಿಶ್ವದಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕೊಡುವ ಯೋಜನೆ ಪ್ರಪಂಚದಲ್ಲಿ ಯಾವುದಾದರೂ ಕಾರ್ಯಕ್ರಮ ಇದ್ದರೆ ಅದು ನರೇಗಾ ಯೋಜನೆ ಎಂದು ಹೇಳಿದ್ದಾರೆ. ಇದನ್ನು ತಡೆಯಲಾಗದೆ ಬಿಜೆಪಿಯವರು ಈ ರೀತಿ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ನಾ ಕೊಡೆ ನೀ ಬಿಡೆ ಹಗ್ಗಜಗ್ಗಾಟ ನಡೆತಿದೆ.. ಇದಕ್ಕೆಲ್ಲ ಹೈಕಮಾಂಡ್ ಕಾರಣ | ಛಲವಾದಿ



















