ವಿಜಯಪುರ: ಪ್ರಜಾಪ್ರಭುತ್ವವಿಲ್ಲ ಎಂದು ಈಗ ಅರ್ಥವಾಗಿದೆ. ಉಪರಾಷ್ಟ್ರಪತಿಗಳಿಗೆ ಅದು ಈಗ ಅರ್ಥವಾಗಿದೆ. ಈ ದೇಶದ ವ್ಯವಸ್ಥೆಯಲ್ಲಿ ಯಾಕೆ? ರಾಜೀನಾಮೆ ಕೊಡಿಸಿದ್ದಾರೆ. ಅವರಿಗೆ ಒತ್ತಡ ಯಾಕೆ ಬಂದಿದೆ ? ಸ್ವಇಚ್ಛೆಯಿಂದ ಯಾಕೆ ರಾಜೀನಾಮೆ ಕೊಟ್ಟರು ಎನ್ನುವುದನ್ನು ಬಿಜೆಪಿಯವರನ್ನು ಕೇಳಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಲಾಡ್, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಮತ್ತು ಹೋಂ ಮಿನಿಸ್ಟರ್ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ಯಾರು ಎಷ್ಟೇ ಪ್ರಭಾವಿ ಅಪರಾಧಿಯಾಗಿದ್ದರೂ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಲ್ಲಲಾಗುವುದು, ನಾವು ಯಾವುದೇ ಅಪರಾಧಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು, ಅಸಂಘಟಿತ ವಲಯಕ್ಕೆ ಸೇರುವ ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಕಾರ್ಮಿಕ ಇಲಾಖೆಯಿಂದ ಅನಕೂಲ ಮಾಡುತ್ತೇವೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಬಿಲ್ ಪಾಸ್ ಮಾಡಿ ತರುತ್ತೇವೆ ಎಂದು ಭರವಸೆ ನೀಡಿದ್ದಾರೆ. ಕಾರ್ಮಿಕರಲ್ಲದವರಿಗೆ ಕಾರ್ಮಿಕ ಕಾರ್ಡ್ ನೀಡಲಾಗಿದೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾವು ಕ್ರಮ ತೆಗೆದುಕೊಂಡಿದ್ದೇವೆ. 56 ಲಕ್ಷ ಕಾರ್ಡ್ ಗಳಲ್ಲಿ 20 ಲಕ್ಷ ಕಾರ್ಡ್ ತೆಗೆದಿದ್ದೇವೆ. 36 ಲಕ್ಷ ಜನರಿಗೆ ಕಾರ್ಮಿಕ ಕಾರ್ಡ್ ನೀಡಿದ್ದೇವೆ. ಕಾರ್ಮಿಕರು ಹೌದೋ ಅಲ್ಲವೋ ಎಂಬುದನ್ನು ನಿಖರವಾಗಿ ತಿಳಿದುಕೊಂಡು ಕಾರ್ಡ್ ನೀಡುತ್ತಿದ್ದೇವೆ ಎಂದು ಸಚಿವರು ಹೇಳಿದ್ದಾರೆ.