ದರ್ಶನ್ (Darshan) ಜೈಲು ಪಾಲಾಗಿದ್ದಕ್ಕೆ ಹಿರಿಯ ನಟಿ ಗಿರಿಜಾ ಲೋಕೇಶ್ (Girija Lokesh) ಕಣ್ಣೀರು ಸುರಿಸಿದ್ದಾರೆ.
ದರ್ಶನ್ ಜೈಲಿನಲ್ಲಿ ಕಷ್ಣಪಡುತ್ತಿರುವುದನ್ನು ಕೇಳಿದರೆ ತುಂಬಾ ನೋವಾಗುತ್ತದೆ ಎಂದು ಕಣ್ಣೀರು ಸುರಿಸಿದ್ದಾರೆ. ಈ ಪ್ರಕರಣದ ಬಗ್ಗೆ ನಾನು ಏನೂ ಹೇಳಲಾರೆ. ಆದರೆ, ದರ್ಶನ್ ಕಷ್ಟ ಪಡುತ್ತಿರುವುದನ್ನು ಕಂಡರೆ ನೋವಾಗುತ್ತದೆ. ಆದಷ್ಟು ಬೇಗ ಇದರಿಂದ ಹೊರಬರಲಿ ಎಂದು ಆಶಿಸುತ್ತೇನೆ. ದೇವರಲ್ಲಿ ಬೇಡಿಕೊಳ್ಳುತ್ತೇನೆ. ಈ ಪ್ರಕರಣ ಕಾನೂನಿನ ಚೌಕಟ್ಟಿನಲ್ಲಿದೆ. ನ್ಯಾಯಾಲಯ ಏನು ತೀರ್ಮಾನ ನೀಡುತ್ತದೆ ಎಂಬುವುದನ್ನು ಕಾಯ್ದುನೋಡಬೇಕಿದೆ ಎಂದು ಕಣ್ಣೀರು ಸುರಿಸಿದ್ದಾರೆ.
14 ವರ್ಷಗಳಿಂದ ದರ್ಶನ್ ನೋಡಿದ್ದೇನೆ. ತುಂಬಾ ಮುಗ್ಧ ಹುಡುಗ. ಬೆಟ್ಟದಂತಹ ಕಷ್ಟಗಳನ್ನು ಮೆಟ್ಟಿ ನಿಂತ ಹುಡುಗ ಆತ. ಆದಷ್ಟು ಬೇಗ ಇದರಿಂದ ಮುಕ್ತರಾಗಿ ದರ್ಶನ್ ಹೊರಬರಲಿ ಎಂದು ಅವರು ಕಣ್ಣೀರು ಹಾಕಿದ್ದಾರೆ.
