ಇತ್ತೀಚೆಗಷ್ಟೇ ಬಸ್ ಟಿಕೆಟ್ (Bus ticket)ದರ ಏರಿಸುವ ಮೂಲಕ ಸಾರಿಗೆ ಇಲಾಖೆ ಶಾಕ್ ಪ್ರಯಾಣಿಕರಿಗೆ ಶಾಕ್ ನೀಡಿತ್ತು. ಇದರ ಬೆನ್ನಲ್ಲೇ ಈಗ ಬೆಂಗಳೂರಿಗರಿಗೆ(Bengalore) ಮತ್ತೊಂದು ಶಾಕ್ ಎದುರಾಗಿದೆ.
ಬಿಎಂಟಿಸಿ(BMTC) ದೈನಿಕ ಹಾಗೂ ಮಾಸಿಕ ಬಸ್ ಪಾಸ್ ದರ ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಇಂದಿನಿಂದಲೇ ನೂತನ ಹೆಚ್ಚಳ ದರ ಜಾರಿಯಾಗಿದೆ.
ಸಾರಿಗೆ (Transport) ಸಂಸ್ಥೆಯು ವಿವಿಧ ವರ್ಗದ ದೈನಿಕ(Daily), ಸಾಪ್ತಾಹಿಕ(weekly) ಮತ್ತು ಮಾಸಿಕ (Monthly)ಪಾಸುಗಳ ದರ ಏರಿಕೆ ಮಾಡಿದೆ. ಬಸ್ ಟಿಕೆಟ್ ದರ ಪರಿಷ್ಕರಣೆಯಾದ ಹಿನ್ನಲೆಯಲ್ಲಿ ಸಂಸ್ಥೆಯ ಆರ್ಥಿಕ ದೃಷ್ಠಿಯಿಂದ ದೈನಿಕ ಮಾಸಿಕ ಪಾಸ್ ಗಳ ದರಗಳನ್ನು ಕೂಡ ಹೆಚ್ಚಳ (Increase)ಮಾಡಲಾಗಿದೆ.
ಸಾಮಾನ್ಯ ದೈನಿಕ ಪಾಸ್ ದರ 70 ರೂ. ಇದ್ದದ್ದು 80 ರೂ.ಗೆ ಏರಿಕೆಯಾಗಿದೆ. ಸಾಮಾನ್ಯ ಸಾಪ್ತಾಹಿಕ ವಾರದ ಪಾಸ್ ದರ ರೂ. 300 ರೂ. ನಿಂದ 350 ರೂ.ಗೆ ಹೆಚ್ಚಳವಾಗಿದೆ. ಹಿರಿಯ ನಾಗರಿಕರ ಸಾಮಾನ್ಯ ಮಾಸಿಕ ಪಾಸ್ ದರ 945 ರೂ. ನಿಂದ 1080 ರೂ.ಗೆ ಹೆಚ್ಚಳವಾಗಿದೆ. ಸಾಮಾನ್ಯ ಮಾಸಿಕ ಪಾಸ್ ದರ 1050 ರೂ. ನಿಂದ 1200 ರೂ.ಗೆ ಹೆಚ್ಚಳವಾಗಿದೆ.