ಬೆಂಗಳೂರು: ರಾತ್ರಿ ವೇಳೆ ಮಾರಕಾಸ್ತ್ರ ಹಿಡಿದು ಓಡಾಡಿದ ಪುಂಡರ ಹೆಡೆಮೂರಿಯನ್ನು ಪೊಲೀಸರು ಕಟ್ಟಿದ್ದಾರೆ.
ಬಂಧಿತ ಆರೋಪಿಗಳು, ರಾತ್ರಿ ವೇಳೆ ಕೈಯಲ್ಲಿ ಲಾಂಗ್ ಹಿಡಿದು ಬೈಕ್ ನಲ್ಲಿ ಓಡಾಡುತ್ತ ಸಾರ್ವಜನಿಕರನ್ನು ಭಯಭೀತಗೊಳಿಸಿದ್ದರು. ಅಲ್ಲದೇ, ರಸ್ತೆ ಮಧ್ಯೆಯೇ ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಡಿಜೆ ಹಳ್ಳಿ ಪೊಲೀಸರು ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಯೀಮ್ ಪಾಷಾ, ಅರಾಫತ್, ಶಾಹಿಲ್, ಜಮತ್, ಅದ್ನಾನ್ ಬಂಧಿತ ಆರೋಪಿಗಳು ಎನ್ನಲಾಗಿದೆ. ಡಿಜೆ ಹಳ್ಳಿ ಪೊಲೀಸ್ ಠಾಣಾಧಿಕಾರಿ ಸುನೀಲ್ ಕಮಾರ್ ಮತ್ತು ಪೊಲೀಸ್ ತಂಡ ಬಿಗು ಕಾರ್ಯಾಚರಣೆಯೊಂದಿಗೆ ಆರೋಪಿಗಳನ್ನು ವಶಕ್ಕೆ ಪಡೆದಿದೆ. ಸದ್ಯ ಆರೋಪಿಗಳು ಬಳಕೆ ಮಾಡಿದ್ದ 2 ಬೈಕ್ ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.