ತುಮಕೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ದೊಡ್ಡ ಮಟ್ಟದ ಸದ್ದು ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರಿಗೆ ಜಾಮೀನು ಸಿಕ್ಕಿದೆ. ಜಾಮೀನು ಸಿಕ್ಕು 10 ದಿನಗಳ ನಂತರ ಮೂವರು ಜೈಲಿನಿಂದ ಹೊರ ಬಂದಿದ್ದಾರೆ.
ನಟ ದರ್ಶನ್, ಪವಿತ್ರಗೌಡ ಸೇರಿದಂತೆ ಇನ್ನಿತರ ವಿರುದ್ಧ ಕೊಲೆಯ ಆರೋಪವಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿಗೆ ಪೊಲೀಸರ ಬಳಿ ಶರಣಾಗಿದ್ದ ಆರೋಪಿಗಳಾದ ರವಿಶಂಕರ್, ಕಾರ್ತಿಕ್, ಕೇಶವಮೂರ್ತಿ ಹಾಗೂ ನಿಖಿಲ್ ಎಂಬುವವರನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿತ್ತು.
15 ನೇ ಆರೋಪಿಯಾಗಿರುವ ಕಾರ್ತಿಕ್, 16 ಆರೋಪಿ ಕೇಶವಮೂರ್ತಿ, 17 ಆರೋಪಿ ನಿಖಿಲ್ ಗೆ ಎರಡು ಲಕ್ಷ ಬಾಂಡ್ ಹಾಗೂ ತಲಾ ಇಬ್ಬರ ಶ್ಯೂರಿಟಿ ಮೇರೆಗೆ ಜಾಮೀನು ನೀಡಲಾಗಿದೆ. ಜಾಮೀನು ಸಿಕ್ಕ ನಂತರ 10 ದಿನಗಳಾದ ಮೇಲೆ ಮೂವರು ಜೈಲಿನಿಂದ ಹೊರ ಬಂದಿದ್ದಾರೆ.
ಸಂಬಂಧಿಕರು ಜಾಮೀನು ಶ್ಯೂರಿಟಿ ನೀಡಿ ಬಿಡುಗಡೆ ಮಾಡಿಸಿದ್ದಾರೆ. ತಡರಾತ್ರಿಯೇ ಮೇಲ್ ಮೂಲಕ ಜಾಮೀನು ಆದೇಶ ಬಂದರೂ ಸಮಯ ಮೀರಿದ ಕಾರಣ ಆರೋಪಿಗಳನ್ನು ಇಂದು ಬಿಡುಗಡೆ ಮಾಡಲಾಗಿದೆ. ಹೊರ ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಏನೂ ಗೊತ್ತಿಲ್ಲ. ಎಲ್ಲವನ್ನೂ ತನಿಖಾಧಿಕಾರಿಗಳ ಎದುರು ವಿವರಿಸಿದ್ದೇವೆ ಎಂದಿದ್ದಾರೆ.