ಬೆಂಗಳೂರು : ವರ್ಷದ ಕೊನೆಗೆ ಶುರುವಾಗಿರೋ ಸ್ಟಾರ್ ಸಿನಿಮಾಗಳ ಜಾತ್ರೆಗೆ ‘45‘ ಹೊಸ ಮೆರುಗು ಕೊಟ್ಟಿದೆ. ಡಾ.ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್.ಬಿ.ಶೆಟ್ಟಿ ತ್ರಿಮೂರ್ತಿಗಳ ಸಂಗಮ ವರ್ಕ್ ಆಗಿದೆ. ಪ್ರಿಮಿಯರ್ ಶೋಗಳಲ್ಲೇ 45 ಚಿತ್ರಕ್ಕೆ ಅಪಾರವಾದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ವರ್ಷದ ಬಾಕ್ಸ್ ಆಫೀಸ್ ನಲ್ಲಿ ಕಾಂತಾರ-1 ಮತ್ತು ಸು ಫ್ರಮ್ ಸೋ ನಂತರ ’45’ ಯಶಸ್ಸಿನ ದಾರಿ ತುಳಿತಿದೆ. ಅರ್ಜುನ್ ಜನ್ಯ ಒಂದು ಪ್ರಯೋಗಾತ್ಮಕ ಕಥೆಯನ್ನ ಕಮರ್ಷಿಯಲ್ ಚೌಕಟ್ಟಿಗೆ ತರೋದ್ರಲ್ಲಿ ಯಶಸ್ವಿಯಾಗಿದ್ದಾರೆ. ಸಿನಿಮಾ ಮೇಲೆ ಸಿನಿಮಾ ಮಾಡಿ ಒಂದು ಗಟ್ಟಿ ಗೆಲುವಿಗಾಗಿ ಕಾಯುತ್ತಿದ್ದ ನಿರ್ಮಾಪಕ ರಮೇಶ್ ರೆಡ್ಡಿ ಇಲ್ಲಿ ಫುಲ್ ಮಾರ್ಕ್ಸ್ ಜೊತೆಗೆ ಪಾಸ್ ಆಗಿದ್ದಾರೆ.
ಚಿತ್ರದಲ್ಲಿ ಬರೋ ಗ್ರಾಫಿಕ್ಸ್ ಕಂಟೆಂಟ್ ಶ್ರೀಮಂತಿಕೆ ಹೆಚ್ಚಿಸುತ್ತೆ. ಇದು ಅಭಿಮಾನಿಗಳಿಗೆ ಮಾಡಿದ ಸಿನಿಮಾ ಎನ್ನಬಹುದು. ಯಾಕಂದ್ರೆ ಇಲ್ಲಿ ‘ತ್ರಿಮೂರ್ತಿ’ಗಳಿಗೆ ಅವರದ್ದೇ ಆದ ಪ್ರಾಮುಖ್ಯತೆ ಇದೆ. ಶಿವಣ್ಣ ಎಂಟ್ರಿ ಗೂಸ್ ಬಂಪ್ಸ್ ಕೊಡುತ್ತೆ. ಅಲ್ಲಲ್ಲಿ ಹಳೇ ‘ರಿಯಲ್ ಸ್ಟಾರ್’ ನೆನಪಾಗ್ತಾರೆ. ರಾಜ್ ಶೆಟ್ಟಿ ಮುಗ್ಧತೆಯೂ ಗಮನ ಸೆಳೆಯುತ್ತೆ. ಶಿವಣ್ಣ,ಉಪ್ಪಿ,ಶೆಟ್ರ ಸ್ಕ್ರೀನ್ ಆಟ ತೆರೆ ಮೇಲೆ ನೋಡಿಯೇ ಎಂಜಾಯ್ ಮಾಡಬೇಕು. ಕಥೆಯ ಸಾರಾಂಶ ಬಿಟ್ಟುಕೊಡೋ ಹಾಗೆ ಇಲ್ಲ. ಸೋ, ಈ ವರ್ಷದ ಮಸ್ಟ್ ವಾಚ್ ಈ ’45’ ಭಯಂಕರ ಲಗ್ಗೆ.
ಇದನ್ನೂ ಓದಿ : ‘ತುಪ್ಪದ ಬ್ಯೂಟಿ’ ಸಿನಿ ಜರ್ನಿಗೆ 15 ವರ್ಷ!



















