ಮೈಸೂರು : ನಾನು ಕೋವಿಡ್ ಸಂದರ್ಭದಲ್ಲಿ ಟಾಸ್ಕ್ ಫೋರ್ಸ್ ಮುಖ್ಯಸ್ಥ ಆಗಿರಲಿಲ್ಲ. ನನ್ನದು ಸಲಹೆ ಮತ್ತು ಅಭಿಪ್ರಾಯ ಕೊಡುವುದು ಅಷ್ಟೇ. ಬೇಕಾದರೆ ಸರ್ಕಾರ ತನಿಖೆ ನಡೆಸಲಿ. ನಾನು ಅದನ್ನು ಎದುರಿಸಲು ಸಿದ್ಧ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಹಗರಣದ ಕುರಿತು ನನಗೆ ಯಾವ ಮಾಹಿತಿಯೂ ಇಲ್ಲ. ನನಗೆ ಏನೂ ಗೊತ್ತಿಲ್ಲ. ಸರ್ಕಾರ ಮೊದಲು ತನಿಖೆಗೆ ಆದೇಶ ನೀಡಲಿ. ನಾವು ಸಲಹೆಗಳನ್ನು ಮಾತ್ರ ನೀಡುತ್ತಿದ್ದೇವು. ಆ ಸಮಿತಿಯಲ್ಲಿ ಅನೇಕ ವೈದ್ಯರು, ತಜ್ಞರು ಇದ್ದಾರೆ. ಅನೇಕ ಅಧಿಕಾರಿಗಳು ಇದ್ದಾರೆ. ಇಲಾಖೆಗಳು ಕೂಡ ಇವೆ ಎಂದಿದ್ದಾರೆ.
ಆ ಸಂದರ್ಭದಲ್ಲಿ ನಮಗೆ ಯಾವುದೇ ಆಡಳಿತಾತ್ಮಕ ಹಾಗೂ ಆರ್ಥಿಕ ಪವರ್ ನೀಡಿರಲಿಲ್ಲ. ಇದರಲ್ಲಿ ಸ್ಪೆಷಲಿಸ್ಟ್ ಆಗಿ ನಾನೊಬ್ಬ ಸದಸ್ಯ ಅಷ್ಟೇ. ನಮ್ಮದು ಏನಿದ್ದರೂ ಸಲಹೆ ಮಾತ್ರ ಎಂದಿದ್ದಾರೆ.