ಕೊಪ್ಪಳ: ಇಟಗಿಯ ಮಹಾದೇವ ದೇವರ ಮೇಲೆ ವರ್ಷದ ಮೊದಲ ಸೂರ್ಯ ಕಿರಣ ಬಿದ್ದಿದ್ದು, ಜನ ಭಕ್ತಿಯಿಂದ ವೀಕ್ಷಿಸಿ ದರ್ಶನ ಮಾಡಿದ್ದಾರೆ.
ಕುಕನೂರು ತಾಲೂಕಿನ ಇಟಗಿ ಗ್ರಾಮದಲ್ಲಿನ ಮಹಾದೇವ ದೇವರ ಮೇಲೆ ಮೊದಲ ಕಿರಣ ಬಿದ್ದಿದೆ. ಈ ದೇವಾಲಯ ಚಕ್ರವರ್ತಿ ಎಂದು ಖ್ಯಾತಿ ಹೊಂದಿದೆ. ಪ್ರತಿ ವರ್ಷದ ಯುಗಾದಿಯಂದು ಈ ದೇವಸ್ಥಾನದಲ್ಲಿನ ದೇವರ ಮೇಲೆ ಸೂರ್ಯ ಕಿರಣ ಬೀಳಲಿದೆ.
ಸೂರ್ಯ ಕಿರಣ ಬೀಳುತ್ತಿದ್ದಂತೆ ಇಲ್ಲಿನ ದೇವರು ಬಂಗಾರದ ವರ್ಣ ಹೊಂದುತ್ತಾನೆ. ಈ ಬಾರಿ ಸೂರ್ಯ ಕಿರಣಗಳು ಕೆಂಪು ಬಣ್ಣದಲ್ಲಿದ್ದು, ಈ ದೃಶ್ಯ ನೋಡಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.