ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಎನಿಸಿಕೊಂಡಿದೆ.
ಈ ಸಿನಿಮಾ ಮೂರೇ ದಿನಕ್ಕೆ ‘ಎಕ್ಕ’ ಹಾಗೂ ‘ಜೂನಿಯರ್’ ಸಿನಿಮಾ ದಾಖಲೆಯನ್ನು ಉಡೀಸ್ ಮಾಡಿದೆ. ಸ್ಯಾಂಡಲ್ವುಡ್ನಲ್ಲಿ ಬಹು ಸಮಯದ ಬಳಿಕ ಒಂದೊಳ್ಳೆಯ ಸಿನಿಮಾ ಬಂದಿದ್ದು, ಸಿಂಗಲ್ ಸ್ಕ್ರೀನ್ ಥಿಯೇಟರ್ಗಳು ಕೂಡ ಫುಲ್ ಆಗಿದ್ದವು ಅನ್ನೋದು ವಿಶೇಷ.
ರಾಜ್ ಬಿ. ಶೆಟ್ಟಿ ಈ ಚಿತ್ರದಿಂದ ದೊಡ್ಡ ಲಾಭ ಕಂಡಿದ್ದಾರೆ. ಸು ಫ್ರಮ್ ಸೋ’ ಮೊದಲ ದಿನ 78 ಲಕ್ಷ ರೂಪಾಯಿ, ಎರಡನೇ ದಿನ 2.17 ಕೋಟಿ ಹಾಗೂ ಮೂರನೇ ದಿನಕ್ಕೆ 3.86 ಕೋಟಿ ರೂಪಾಯಿ ಗಳಿಕೆ ಆಗಿದೆ. ಸಿನಿಮಾ ಮೂರು ದಿನಕ್ಕೆ 6.81 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಪ್ರೀಮಿಯರ್ ಶೋಗಳ ಗಳಿಕೆಯೂ ಸೇರಿದರೆ ಸರಿ ಸುಮಾರು 8 ಕೋಟಿ ಕಲೆಕ್ಷನ್ ಆದಂತೆ ಆಗುತ್ತದೆ.


















