ಬೆಂಗಳೂರು : ಗ್ಯಾರಂಟಿಗಳನ್ನು ರಾಜ್ಯ ಸರ್ಕಾರ ಕೊಟ್ಟಿದೆ, ಇದರಿಂದ ಸರ್ಕಾರಕ್ಕೆ ಹೊರೆಯಾಗುತ್ತಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಹಿಮೋಫಿಲಿಯಾ ರೋಗಿಗಳಿಗೆ ಉಚಿತ ಆಂಬುಲೆನ್ಸ್ ಸೇವೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಡಿಕೆಶಿ, 200 ಯೂನಿಟ್ ಉಚಿತ ಕರೆಂಟ್, ಗೃಹಲಕ್ಷ್ಮಿ, ಫ್ರೀ ಬಸ್, ಅನ್ನಭಾಗ್ಯ, ಶಕ್ತಿಯೋಜನೆಯಂತಹ ಗ್ಯಾರಂಟಿಗಳನ್ನ ರಾಜ್ಯ ಸರ್ಕಾರ ಕೊಟ್ಟಿದೆ. ಸರ್ಕಾರಕ್ಕೆ ಇದರಿಂದ ಹೊರೆಯಾಗುತ್ತಿರಬಹುದು, ಆದ್ರೆ ನಿಮಗೆ ಮಾನಸಿಕವಾಗಿ ಧೈರ್ಯ ತುಂಬಲು ಹಾಗೂ ಆರ್ಥಿಕವಾಗಿ ಶಕ್ತಿ ತುಂಬಲು ಇಂತಹ ದೊಡ್ಡ ತೀರ್ಮಾನವನ್ನ ನಮ್ಮ ಸರ್ಕಾರ ಮಾಡಿದೆ ಎಂದು ಹೇಳಿದ್ದಾರೆ.
ಜೇಬಲ್ಲಿ 10 ರೂಪಾಯಿ ಇದ್ರೆ ಕೊಡೋನು 100 ರೂಪಾಯಿ ಕೊಡೋಕೆ ಮುಂದೆ ಬರ್ತಾನೆ. ಆದ್ದರಿಂದ ಸರ್ಕಾರಕ್ಕೆ ಹೊರೆಯಾದ್ರೂ ಗ್ಯಾರಂಟಿಗಳನ್ನ ಜಾರಿಗೊಳಿಸಿದೆ ಎಂದಿದ್ದಾರೆ.
ಇದನ್ನೂ ಓದಿ : ಆಕಸ್ಮಿಕವಾಗಿ ಹೊತ್ತಿ ಉರಿದ 12 ಲೋಡ್ ಹುಲ್ಲಿನ ಬಣವೆ



















