ಕಾಂಗ್ರೆಸ್ ಸರ್ಕಾರದಿಂದ ಬೀದಿ ನಾಯಿಗಳಿಗೆ ಬಾಡೂಟದ ಭಾಗ್ಯ ಸಿಕ್ಕಿದೆ. ದೇಶದಲ್ಲೇ ಮೊದಲ ಬಾರಿಗೆ ಬೀದಿ ನಾಯಿಗಳಿಗೆ ಸ್ಥಳೀಯ ಸಂಸ್ಥೆಯಿಂದ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಈ ಮೂಲಕ ಬೀದಿ ನಾಯಿಗಳಿಗೂ ಕಾಂಗ್ರೆಸ್ ಸರ್ಕಾರ ಬಾಡೂಟದ ಗ್ಯಾರಂಟಿ ನೀಡಿದೆ.
ಬಿಬಿಎಂಪಿಯು ಇನ್ನು ಮುಂದೆ ಬೀದಿ ನಾಯಿಗಳ ಬಗ್ಗೆ ಕಾಳಜಿ ವಹಿಸಲು ಮುಂದಾಗಿದೆ. ಜನರ ಹೊಟ್ಟೆಗೆ ಹಿಟ್ಟಿಲ್ಲ, ಬೀದಿನಾಯಿಗಳಿಗೆ ಬಾಡೂಟದ ಭಾಗ್ಯ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ.
ಈ ಐಡಿಯಾ ಕೊಟ್ಟ ಬೃಹಸ್ಪತಿ ಅಧಿಕಾರಿ ಯಾರು? ಜನರ ತೆರಿಗೆ ಹಣವನ್ನು ಲೂಟಿ ಮಾಡಲು ಈ ಐಡಿಯಾವೇ? ಜನರ ಮೇಲೆ ಕಾಳಜಿ ಇಲ್ಲದ ನಿಮಗೆ ನಾಯಿಗಳ ಮೇಲೆ ಪ್ರೀತಿ ಯಾಕೆ? ಎಂದು ಸಾರ್ವಜನಿಕರು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಿನ ಜನರಿಗೆ ಮೂಲಭೂತ ಸೌಕರ್ಯಗಳಿಲ್ಲ. ಅದರೆ ಬೀದಿ ನಾಯಿಗಳಿಗೆ ಮಾಂಸ, ಚಿಕನ್, ಎಗ್ ರೈಸ್ ಭಾಗ್ಯ ಸಿಗುತ್ತಿದೆ ಎಂದು ಹಲವರು ಆರೋಪಿಸುತ್ತಿದ್ದಾರೆ. ಈಗಾಗಲೇ ಪಾಲಿಕೆಯು ಬೀದಿ ನಾಯಿಗಳಿಗೆ ಊಟ ಹಾಕಲು ಟೆಂಡರ್ ಆಹ್ವಾನಿಸಿದೆ. ಪಾಲಿಕೆಯ 8 ವಲಯಗಳಲ್ಲಿ ಬೀದಿ ನಾಯಿಗಳಿಗೆ ನಿತ್ಯ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿ ದಿನ ಚಿಕನ್ ಹಾಗೂ ಎಗ್ ರೈಸ್ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಬೀದಿ ನಾಯಿಗಳ ಊಟಕ್ಕೆ 2.80 ಕೋಟಿ ರೂ. ಟೆಂಡರ್ ಕರೆಯಲಾಗಿದೆ. ಪ್ರತಿ ವಲಯದಲ್ಲಿ ನಿತ್ಯ 600 ರಿಂದ 700 ಬೀದಿ ನಾಯಿಗಳಿಗೆ ಬಾಡೂಟ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತ ವಿಕಾಸ್ ಕಿಶೋರ್ ಸುರಲ್ಕರ್ ಹೇಳಿದ್ದಾರೆ.